ADVERTISEMENT

ಮಕ್ಕಳ ಕೂಟದ ಅವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 19:40 IST
Last Updated 12 ಏಪ್ರಿಲ್ 2018, 19:40 IST

ಬೆಂಗಳೂರಿನ ಚಾಮರಾಜಪೇಟೆಯ ‘ಮಕ್ಕಳ ಕೂಟ’ಕ್ಕೆ ಮೊನ್ನೆ ನಾನು ನನ್ನ ಎರಡು ವರ್ಷದ ಮಗನನ್ನು ಕರೆದುಕೊಂಡು ಹೋಗಿದ್ದೆ. ಅಲ್ಲಿನ ಉದ್ಯಾನದ ಸ್ಥಿತಿ ನೋಡಿ ಗಾಬರಿ ಆಯಿತು. ಅಲ್ಲಿನ ಜೋಕಾಲಿಗಳಲ್ಲಿ ಒಂದೂ ಸುಸ್ಥಿತಿಯಲ್ಲಿ ಇರಲಿಲ್ಲ. ಅಲ್ಲೇ ಕಸದ ಗಾಡಿಗಳೂ ಇದ್ದದ್ದು ನೋಡಿ ಅಸಹ್ಯವಾಯಿತು. ಹಿರಿಯ ನಾಗರಿಕರಿಗಾಗಿ ಇರುವ ವ್ಯಾಯಾಮ ಉಪಕರಣಗಳ ಮೇಲೆ ಪುಂಡರು ಕೂತು ಹಾಳು ಮಾಡುತ್ತಿದ್ದರು. ಇದನ್ನೆಲ್ಲಾ ನೋಡಿ ಮನಸ್ಸಿಗೆ ಬಹಳ ಬೇಸರವಾಯಿತು.

ಪ್ರಖ್ಯಾತ ಲೇಖಕಿ ಆರ್ ಕಲ್ಯಾಣಮ್ಮನವರು ಕಳೆದ ಶತಮಾನದಲ್ಲಿ ಸ್ಥಾಪಿಸಿದ ‘ಮಕ್ಕಳ ಕೂಟ’ದಲ್ಲಿರುವ ಉದ್ಯಾನವನ್ನು ಸುಸ್ಥಿತಿಯಲ್ಲಿ ಇಡಲಾಗದ ನಮ್ಮ ವ್ಯವಸ್ಥೆ ಬಗ್ಗೆ ಮರುಕ ಉಂಟಾಯಿತು. ಸಂಬಂಧಪಟ್ಟವರು ಇತ್ತ ಗಮನಹರಿಸಬೇಕು. ಅವ್ಯವಸ್ಥೆಗಳನ್ನು ಸರಿಪಡಿಸಬೇಕು. ಶಿಸ್ತು ಕಾಪಾಡಲು ಜನರಿಗೆ ತಾಕೀತು ಮಾಡಬೇಕು.

–ಸಂಜೀವಿನಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.