ಮಮತಾ ಪೂಜಾರಿ ನಾಯಕತ್ವದ ಭಾರತೀಯ ಮಹಿಳಾ ತಂಡ ವಿಶ್ವ ಕಬಡ್ಡಿ ಚಾಂಪಿಯನ್ ಆಗಿದೆ. ಫೈನಲ್ ಪಂದ್ಯದಲ್ಲಿ ಇರಾನಿನ ಮಹಿಳೆಯರನ್ನು ಸೋಲಿಸಿ ಭಾರತೀಯ ಗ್ರಾಮೀಣ ಕ್ರೀಡೆ ಕಬಡ್ಡಿಗೆ ಮೆರುಗು ತಂದಿದೆ.
ಮಹಾರಾಷ್ಟ್ರ ಸರ್ಕಾರ ಭಾರತ ತಂಡವನ್ನು ಪ್ರತಿನಿಧಿಸಿದ್ದ ತನ್ನ ರಾಜ್ಯದ ಮೂವರು ಮಹಿಳೆಯರಿಗೆ ತಲಾ ಒಂದು ಕೋಟಿ ರೂಪಾಯಿ ಹಾಗೂ ಸರ್ಕಾರಿ ನೌಕರಿಯನ್ನು ಘೋಷಿಸಿದೆ.
ಆದರೆ ತಂಡದ ನಾಯಕಿ ಮಮತಾ ಪೂಜಾರಿ ಅವರಿಗೆ ರಾಜ್ಯದ ಮುಖ್ಯಮಂತ್ರಿ ಸದಾನಂದ ಗೌಡರು ರೂ 5 ಲಕ್ಷ ಕೊಟ್ಟು ಕೈತೊಳೆದುಕೊಂಡಿದ್ದಾರೆ.
ಬಡತನದಲ್ಲಿದ್ದರೂ ಸ್ವಪ್ರಯತ್ನದಿಂದ ಮೇಲೆ ಬಂದು ದೇಶಕ್ಕೆ ಕೀರ್ತಿ ತಂದ ಮಮತಾ ಅವರಿಗೂ ಮಹಾರಾಷ್ಟ್ರ ಸರ್ಕಾರ ನೀಡಿದಷ್ಟೇ ಹಣವನ್ನು ನೀಡಿ ಅವರ ಸಾಧನೆಯನ್ನು ಪುರಸ್ಕರಿಸಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.