ADVERTISEMENT

ಮಲ ಹೊರುವ ಪದ್ಧತಿ ನಿರ್ಮೂಲನೆ ಮಾಡಿ

ಚಂದ್ರಶೇಖರ ಮುಕ್ಕುಂದಿ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ಮಲ ಹೋರುವ ಪದ್ಧತಿ ಇನ್ನೂ ಅಸ್ತಿತ್ವದಲ್ಲಿರುವುದು ದುಃಖದ ವಿಷಯವಾಗಿದೆ. ಸದ್ಯ ಭಾರತದಲ್ಲಿ 2.3 ಲಕ್ಷ ಕುಟುಂಬಗಳು ಶೌಚಾಲಯ ಶುದ್ಧಿ ಮಾಡುವ ಕೆಲಸದಲ್ಲಿ ನಿರತವಾಗಿವೆ ಎಂಬುದು ಹೆಮ್ಮೆ ತರುವ ಸಂಗತಿಯಲ್ಲ.ಕೇವಲ ನಗರ ಪ್ರದೇಶಗಳು ಅಭಿವೃದ್ಧಿ ಹೊಂದಿದರೆ ಅದು ಅಭಿವೃದ್ಧಿಯಲ್ಲ.

ಗ್ರಾಮೀಣ ಭಾಗದ ಸಾಮಾಜಿಕ ಸಮಸ್ಯೆಗಳು ಹಾಗೂ ಇಂತಹ ಪದ್ಧತಿಗಳೂ ನಿರ್ಮೂಲನೆ ಆಗಬೇಕು. ಹಾಗೆಯೇ ಎಷ್ಟೋ ಹಳ್ಳಿಗಳಲ್ಲಿ ದಲಿತರು ಗ್ರಾಮದ ಹೊರಗಡೆ ವಾಸಿಸುತ್ತಿದ್ದಾರೆ. ಅಂತಹ ಸ್ಥಿತಿ ನಿರ್ಮೂಲನೆಯಾಗಬೇಕು. ಎಲ್ಲರಿಗೂ ಸಮಪಾಲು ದೊರೆಯಬೇಕು. ಆಗ ಮಾತ್ರ ಅಭಿವೃದ್ಧಿ ಎಂದು ಹೇಳಲು ಸಾಧ್ಯ.
                                   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT