
ಕೈ ಕೊಟ್ಟ ಮಳಿ
ಬಿಸಾಕತೈತಿ ಬಿಸಿ ಗಾಳಿ
ನೀರಿಲ್ಲದ ಒಣಗ್ಯಾವ
ಎಲ್ಲ ಹಳ್ಳ, ಹೊಳಿ,
ಕುಡ್ಯಾಕ ನೀರಿಲ್ಲದ ತಪ್ಪೈತಿ
ಜನರ ಬದುಕಿನ ಹಳಿ,
ತುಟ್ಟಿ ಆಗೈತಿ ಅಕ್ಕಿ, ಬ್ಯಾಳಿ
ಕೆಲಸ ಇಲ್ಲದಕ ಮಂದಿ
ಹೊಂಟಾರ ಗುಳಿ,
ಯಪ್ಪಾ ಮಳಿರಾಯ ಸಾಕ ಇನ್ನ!
ದೌಡ ಹಸಿ ಮಾಡಾಕ ನೆಲಾ
ಸುರಸ ನಿನ್ನ ಮಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.