ಶುದ್ಧ ಕಾಯಕದಲಿ ಸೇವೆ
ಮಾಡುವುದನ್ನು ಬಿಟ್ಟು
ಅಡ್ಡದಾರಿಯಲಿ ಸಾಗುತ್ತಾ ....
ಕಂಡ - ಕಂಡ ದೇವರಿಗೆ
ಕೈಮುಗಿದರೇನು
ಗುಡಿ - ಗುಂಡಾರವ
ಸುತ್ತಿದರೇನು
ಜಪ - ತಪ, ಹೋಮ
ಮಾಡಿಸಿದರೇನು
ಬಿತ್ತಿದ ಬೇವಿಗೆ
ಬರುವುದೇನು ಮಾವು?
ಮಾಡಿದ ಅಪರಾಧಕ್ಕೆ
ತಪ್ಪುವುದೇನು ಶಿಕ್ಷೆ??
ಮಾಡಿದ್ದುಣ್ಣು ಮಹಾರಾಯ!!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.