ADVERTISEMENT

ಮಾವುತ ಮತ್ತು ಜಾತಿ!

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 19:30 IST
Last Updated 3 ಅಕ್ಟೋಬರ್ 2017, 19:30 IST
ಮಾವುತ ಮತ್ತು ಜಾತಿ!
ಮಾವುತ ಮತ್ತು ಜಾತಿ!   

ಮೈಸೂರಿನಲ್ಲಿ ಈಚೆಗೆ ನಡೆದ ದಸರಾ ಜಂಬೂ ಸವಾರಿಯಲ್ಲಿ ಅರ್ಜುನ ಆನೆಯನ್ನು ಮುನ್ನಡೆಸಿ ಮೆಚ್ಚುಗೆಗೆ ಪಾತ್ರರಾದ ಮಾವುತ ವಿನೂ, ತನ್ನ ಮನದಾಳದ ಮಾತುಗಳನ್ನು ತುಂಬ ದುಃಖದಿಂದ ಹೇಳಿಕೊಂಡಿದ್ದಾರೆ.

‘ಕಳೆದ ಬಾರಿಯೇ ಅರ್ಜುನನನ್ನು ಮುನ್ನಡೆಸಲು ಅವಕಾಶ ಸಿಗುತ್ತಿತ್ತು. ಆದರೆ ಅರ್ಜುನನ ಜೊತೆ ಒಡನಾಟ ಇರಲಿಲ್ಲ ಎಂದು ನಾನೇ  ಸುಮ್ಮನಿದ್ದೆ. ದಲಿತ ಎಂಬ ಕಾರಣಕ್ಕೆ ಈ ಬಾರಿ ಅವಕಾಶ ತಪ್ಪಿಸಲು ಹಲವರು ಪ್ರಯತ್ನಿಸಿದ್ದರು.  ಇದರಿಂದ ತುಂಬ ನೋವುಂಟಾಯಿತು’ ಎಂದು ಹೇಳಿಕೊಂಡಿದ್ದಾರೆ. ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಯಾವ ರೀತಿ ಮುಂದುವರಿಯುತ್ತಿದೆ, ಸಂವಿಧಾನ ಜಾರಿಯಾಗಿ 67 ವರ್ಷ ಕಳೆದರೂ ಯಾವ ರೀತಿ ಭೇದ ಭಾವ ಇದೆ ಎಂಬುದಕ್ಕೆ ಇವರ ಮಾತುಗಳು ನಿದರ್ಶನ.

‘ಅಹಿಂದ’ ವರ್ಗಗಳ ಜತೆ ಗುರುತಿಸಿಕೊಂಡಿರುವ ಸಿದ್ದರಾಮಯ್ಯನವರ ಸ್ವಂತ ಜಿಲ್ಲೆಯಲ್ಲೇ ಇಂಥ ಹುನ್ನಾರ ನಡೆದಿದ್ದರೂ, ಯಾವ ದಲಿತ ರಾಜಕಾರಣಿಯೂ ತುಟಿ ಬಿಚ್ಚಿಲ್ಲ. ಹೇಗಿದೆ ನೋಡಿ ನಮ್ಮ ರಾಜ್ಯದ ಪರಿಸ್ಥಿತಿ!

ADVERTISEMENT

-ನಾಗರಾಜು ಮೌರ್ಯ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.