ADVERTISEMENT

ಮೀಸಲು ಆಸನ ಬಿಟ್ಟುಕೊಡಿ

ಕುಂದು ಕೊರತೆ

ವಿ.ಹೇಮಂತ ಕುಮಾರ
Published 4 ಜನವರಿ 2016, 19:35 IST
Last Updated 4 ಜನವರಿ 2016, 19:35 IST

ನಗರ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರು, ಅಂಗವಿಕಲರು, ಹಿರಿಯ ನಾಗರಿಕರಿಗೆ ಆಸನಗಳನ್ನು ಮೀಸಲಿಡಲಾಗಿದೆ. ಆದರೆ ಬನ್ನೇರುಘಟ್ಟದಿಂದ ನಗರ ಸಾರಿಗೆ ಬಸ್‌ನಲ್ಲಿ ಪ್ರಯಾಣ ಮಾಡುವಾಗ ಹಿರಿಯ ನಾಗರಿಕರು ಹಾಗೂ ಮಹಿಳೆಯರು ನಿಂತೇ ಪ್ರಯಾಣ ಮಾಡುತ್ತಿದ್ದಾರೆ. ಮೀಸಲಿರುವ ಆಸನಗಳಲ್ಲಿ ಬೇರೆಯವರು ಕುಳಿತುಕೊಳ್ಳುತ್ತಿದ್ದು, ಮಹಿಳೆಯರು, ಅಂಗವಿಕಲರು, ಹಿರಿಯ ನಾಗರಿಕರು ಬಂದರೆ ಅವರಿಗೆ ಆಸನವನ್ನು ಬಿಟ್ಟುಕೊಡುವ ಸೌಜನ್ಯವನ್ನು ಪ್ರಯಾಣಿಕರು ತೋರಿಸುವುದಿಲ್ಲ. ಇದು ನಗರ ಸಾರಿಗೆಯ ಎಲ್ಲಾ ಬಸ್ಸುಗಳಲ್ಲಿಯೂ ಕಂಡುಬರುತ್ತಿರುವ ಸಾಮಾನ್ಯ ದೃಶ್ಯ. ಮೀಸಲಿರುವ ಆಸನಗಳನ್ನು ಅವರಿಗೆ ಬಿಟ್ಟು ಕೊಡುವಂಥ ಕಾರ್ಯಕ್ಕೆ ಬಸ್‌ ಕಂಡಕ್ಟರ್‌ಗಳೂ ಮುಂದಾಗುತ್ತಿಲ್ಲ. ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.