ADVERTISEMENT

ಮುಖ್ಯಮಂತ್ರಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಹಿತರಕ್ಷಣೆ!

ಬಿಲಾಲ್ ಅಹ್ಮದ ಖಾಜಿ, ಅಣ್ಣಿಗೇರಿ
Published 23 ಡಿಸೆಂಬರ್ 2012, 19:59 IST
Last Updated 23 ಡಿಸೆಂಬರ್ 2012, 19:59 IST

ರಾಜ್ಯ ಸರ್ಕಾರ ಪ್ರಸಕ್ತ ವರ್ಷ ಅಲ್ಪಸಂಖ್ಯಾತರ ಹಿತರಕ್ಷಣೆ ಹಾಗೂ ಶ್ರೇಯೋಭಿವೃದ್ಧಿಗಾಗಿ ರೂ 235 ಕೋಟಿ ಅನುದಾನ ಒದಗಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ  ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಚಟುವಟಿಕೆ ಸೇರಿದಂತೆ ರೂ 240 ಕೋಟಿ ಹಜ್‌ಘರ್ ನಿರ್ಮಾಣಕ್ಕೆ ರೂ 10 ಕೋಟಿ ನೀಡಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ದಾರೆ. ಆದರೆ, ಮುಖ್ಯಮಂತ್ರಿ ಅವರ ಧಾರವಾಡ ಜಿಲ್ಲೆಯ ವಾಸ್ತವ ಸ್ಥಿತಿಯೇ ಬೇರೆ. ಇಲ್ಲಿಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಗುರಿಗಿಂತ ಹೆಚ್ಚಿನ ಅರ್ಜಿಗಳು ಬಂದಿವೆ. ನಿಗದಿತ ಗುರಿ ಹೆಚ್ಚು ಮಾಡುವಂತೆ ಬರೆದ ಪತ್ರಕ್ಕೆ ಸರ್ಕಾರದಿಂದ ಉತ್ತರವಿಲ್ಲ.

2011-12ನೇ ಸಾಲಿನ ಅರ್ಜಿದಾರರ ಸಬ್ಸಿಡಿ ಹಾಗೂ ಮಾರ್ಜಿನ್ ಹಣ  ಈವರೆಗೂ ಬಿಡುಗಡೆಯಾಗಿಲ್ಲ. ಬ್ಯಾಂಕುಗಳು ಸಬ್ಸಿಡಿ ಹಣ ಮೊದಲೇ ಕೇಳುತ್ತವೆ. ಮೊದಲೇ ಸಬ್ಸಿಡಿ ಬಿಡುಗಡೆಗೊಳಿಸದೇ ಇದ್ದುದರಿಂದ ಸಾಲ ನೀಡಲು ಬ್ಯಾಂಕ್‌ಗಳು ನಿರಾಕರಿಸುತ್ತಿವೆ. ಅವಧಿ ಮೀರಿದ್ದಕ್ಕೆ ಬ್ಯಾಂಕುಗಳು ಸಾಲದ ಅರ್ಜಿ ತಿರಸ್ಕರಿಸುತ್ತಿವೆ. ಇತ್ತೀಚಿನ 2-3 ತಿಂಗಳಲ್ಲಿ ನಿಗಮದ 3 ಎಂ.ಡಿ.ಗಳು ಬದಲಾಗಿದ್ದಾರೆಂದರೆ ನಿಗಮ ಎತ್ತ ಸಾಗಿದೆ ಎಂದು ಊಹಿಸಬಹುದು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.