`ಅಧಿಕಾರಚ್ಯುತಿ~ಯ ಭೀತಿಯ ಆರೋಪ ಹೊತ್ತಿರುವ ಚಾಮಾರಾಜನಗರದ ಚಾಮರಾಜೇಶ್ವರ ಸನ್ನಿಧಿಯಲ್ಲಿ ಅಷ್ಟಮಂಗಲ ಪ್ರಣೀತ ಯಜ್ಞಯಾಗಾದಿಗಳು ವೈಭವೋಪೇತವಾಗಿ ನೆರವೇರಿವೆ.
ರಾಜಕಾರಣಿಗಳ `ಮಂಗಲ~ವನ್ನೇ ಪ್ರಧಾನವಾಗಿರಿಸಿಕೊಂಡ ಇಂತಹ ವೈದಿಕ ಪ್ರಕ್ರಿಯೆಗಳು ಸಫಲವಾಗುತ್ತವೆಯೇ? `ಗತ~ ವಾದುದನ್ನು ನೋಡಿದರೆ `ಇಲ್ಲ~ವೆಂದೇ ಹೇಳಬೇಕಾಗಿದೆ.
ಹಿಂದೆ ಇಂದಿರಾ ಗಾಂಧಿಯವರ ಶ್ರೇಯಸ್ಸಿಗಾಗಿ ತಲೆ ಬೋಳಿಸಿಕೊಂಡ (ತಾತ್ಕಾಲಿಕವಾಗಿ) 200 ಮಂದಿ ವಿಪ್ರೋತ್ತಮರು ದೆಹಲಿಗೆ ತೆರಳಿ ಯಜ್ಞಕರ್ಮಾನುಷ್ಠಾನಗಳನ್ನು ನೆರವೇರಿಸಿದ್ದರು. ಆದರೆ ಇಂದಿರಾ ಗಾಂಧಿಯವರು ತಮ್ಮ ಅಂಗರಕ್ಷಕರಿಗೇ ಬಲಿಯಾದರು!
ಎಚ್.ಡಿ.ದೇವೇಗೌಡ, ಎಸ್. ಎಂ. ಕೃಷ್ಣ, ಧರ್ಮಸಿಂಗ್ ಮೊದಲಾದವರು ಮೌಢ್ಯವನ್ನು ಬೆಂಬಲಿಸಿದವರೇ.
ರೆಡ್ಡಿ ಸೋದರರ ಪರವಾಗಿ ಬೆಂಗಳೂರಿನಲ್ಲಿ ವೈಭವದ ಯಜ್ಞಯಾಗಾದಿಗಳು ನಡೆದಿದ್ದವು. ಯಡಿಯೂರಪ್ಪ, ಕುಮಾರಸ್ವಾಮಿಗಳು ಸಾಕಷ್ಟು ಯಜ್ಞಯಾಗಾದಿಗಳನ್ನು ನಡೆಸಿದ್ದರು. ಅವರೆಲ್ಲ ಈಗೇನಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗಿದೆ.
ನಾವು `ಸರಿ~ ಯಾಗಿದ್ದರೆ ಯಾವುದಕ್ಕೂ ಭಯಪಡಬೇಕಾಗಿಲ್ಲ. ತಪ್ಪು ಮಾರ್ಗದಲ್ಲಿ ನಡೆದಾಗ ಪಾಪಪ್ರಜ್ಞೆ ಕಾಡುತ್ತದೆ. ಆಗ ಅವರು ~ಪರಿಹಾರ~ಕ್ಕೆಂದು ಜ್ಯೋತಿಷಿಗಳಿಗೆ ಶರಣಾಗುತ್ತಾರೆ.
ಜ್ಯೋತಿಷಿಗಳು ಮತ್ತು ಪುರೋಹಿತವರ್ಗ ಇವರ `ಪಾಪಪ್ರಜ್ಞೆ~ಯನ್ನು `ನಗದು~ಮಾಡಿಸಿಕೊಳ್ಳುತ್ತದೆ. ಒಂದಂತೂ ನಿಜ, ಮೂರ್ಖರನ್ನು ಸರಿದಾರಿಗೆ ತರಲು ಸಾಧ್ಯವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.