ADVERTISEMENT

ಮೆಟ್ರೋ ನಿಲ್ದಾಣಗಳಲ್ಲಿ ಆಸನಗಳ ವ್ಯವಸ್ಥೆ ಮಾಡಿ!

ಕುಂದು ಕೊರತೆ

ಜೆ.ಆರ್‌.ಆದಿನಾರಾಯಣ ಮುನಿ, ಬೆಂಗಳೂರು
Published 31 ಆಗಸ್ಟ್ 2015, 19:30 IST
Last Updated 31 ಆಗಸ್ಟ್ 2015, 19:30 IST

ಬೆಂಗಳೂರು ಮೆಟ್ರೋ ರೈಲುಗಳಲ್ಲಿ ನಿತ್ಯವೂ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಮೆಟ್ರೋ ರೈಲಿನಿಂದ ಸಂಚಾರಕ್ಕೆ ತುಂಬ ಅನುಕೂಲವಾಗಿದ್ದು ಟ್ರಾಫಿಕ್ ಸಮಸ್ಯೆ ಕೂಡ ತಕ್ಕ ಮಟ್ಟಿಗೆ ಕಡಿಮೆಯಾಗಿದೆ. ಆದರೆ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಆಸನಗಳ ಕೊರತೆ ಇದೆ. ಒಂದು ರೈಲಿನಿಂದ ಇನ್ನೊಂದು ರೈಲಿಗೆ 10 ನಿಮಿಷಗಳ ಅಂತರವಿದೆ. ಆ ಸಮಯದಲ್ಲಿ ಪ್ರಯಾಣಿಕರು ನಿಂತೇ ಇರಬೇಕು. ಮೆಟ್ರೋ ರೈಲಿನಲ್ಲಿ ವೃದ್ಧರೂ, ಸ್ತ್ರೀಯರೂ ಅಶಕ್ತರೂ ಹಾಗೂ ಮಕ್ಕಳು ಪ್ರಯಾಣಿಸುತ್ತಿದ್ದು, ಅವರಿಗೆ ಆಸನಗಳ ಕೊರತೆಯಿದ್ದು, ತಕ್ಷಣ ಆಸನಗಳ ವ್ಯವಸ್ಥೆ ಮಾಡಿ, ಮೆಟ್ರೋ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟರೆ ಅನುಕೂಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.