ದೇಶದಾದ್ಯಂತ ಬಡತನ, ಹಸಿವು, ಮಹಿಳೆಯರ ಮೇಲೆ ದೌರ್ಜನ್ಯ, ರೈತ ಆತ್ಮಹತ್ಯೆ ಪ್ರಕರಣಗಳು, ನಿರುದ್ಯೋಗ ಸಮಸ್ಯೆ, ಬರ, ಪ್ರವಾಹ ಸಮಸ್ಯೆ, ದೇಶದಲ್ಲಿ ತಾಂಡವಾಡುತ್ತಿವೆ, ಸರಕಾರವು ಮೊದಲು ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಮಾಡಲಿ, ಇದನ್ನೆಲ್ಲ ಬಿಟ್ಟು ಕೈಗೊಂದು ಮೊಬೈಲ್ ಕಾರ್ಯಕ್ರಮವೆಂಬುದು ರಾಜಕೀಯ ತಂತ್ರವಾಗಿ ಕಾಣಿಸುತ್ತಿದೆ.
ಹಸಿವಿನಿಂದ, ಪೌಷ್ಟಿಕ ಆಹಾರ ಕೊರತೆಯಿಂದ ಸಾಯುವವನನ್ನು ಬದುಕಿಸಿ. ಬಡವನಿಗೆ ಬೇಕಾದದ್ದು ಹೊಟ್ಟೆತುಂಬ ಊಟ ನಿಮ್ಮ ಮೊಬೈಲ್ ಅಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.