ADVERTISEMENT

ಮೌಢ್ಯದ ಪರಮಾವಧಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 19:30 IST
Last Updated 3 ಅಕ್ಟೋಬರ್ 2017, 19:30 IST
ಮೌಢ್ಯದ ಪರಮಾವಧಿ
ಮೌಢ್ಯದ ಪರಮಾವಧಿ   

ಮಹಿಳೆಯ ಮೈಮೇಲೆ ಬಂದಿರುವ ದೆವ್ವ ಬಿಡಿಸುವುದಾಗಿ ಹೇಳಿ, ಪೂಜಾರಿಯೊಬ್ಬ ಆ ಮಹಿಳೆಯನ್ನು ಥಳಿಸಿರುವ ಸುದ್ದಿಯನ್ನು ಓದಿ ಮನಸ್ಸಿಗೆ ತುಂಬಾ ಹಿಂಸೆಯಾಯಿತು (ಪ್ರ.ವಾ., ಅ.3). ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಪ್ರತೀ ಹಳ್ಳಿಯಲ್ಲಿ ಇಂಥ ಘಟನೆಗಳು ಸರ್ವೇ ಸಾಮಾನ್ಯ ಎಂಬಂತಾಗಿವೆ.

ಇಂಥ ಮೂಢನಂಬಿಕೆಗಳಿಗೆ ಸಿಲುಕುವವರು ಬಹುತೇಕವಾಗಿ ಬಡ, ಅನಕ್ಷರಸ್ಥ ಮಹಿಳೆಯರೇ ಆಗಿರುತ್ತಾರೆ.

ಮಹಿಳೆ ಕೌಟುಂಬಿಕ ಸಮಸ್ಯೆಗಳಿಂದ ನಲುಗಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಅಸಹಜವಾಗಿ ವರ್ತಿಸಲಾರಂಭಿಸಿದಾಗ ಅಥವಾ ಆರೋಗ್ಯ ಸಮಸ್ಯೆಯಿಂದ ಬಳಲಿದಾಗ ಆಕೆಯನ್ನು ವೈದ್ಯರ ಬಳಿ ಕರೆದೊಯ್ಯುವ ಬದಲು ಹೀಗೆ ಪೈಶಾಚಿಕ ಕೃತ್ಯ ನಡೆಸುವ ಪೂಜಾರಿಗಳ ಬಳಿ ಕರೆದೊಯ್ದು ಹಿಂಸಿಸುತ್ತಾರೆ.

ADVERTISEMENT

ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವ ಹೊಣೆ ಇಡೀ ಸಮಾಜದ ಮೇಲಿದೆ. ವಿಚಾರವಂತಿಕೆ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವತ್ತ ಚಿಂತನೆಗಳು ನಡೆಯಬೇಕು.

–ಕೆ.ಸಿ. ರತ್ನಶ್ರೀ ಶ್ರೀಧರ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.