ADVERTISEMENT

ರಕ್ತಾಭಿಷೇಕ ಬೇಡುವರೇ?

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 19:30 IST
Last Updated 12 ಮಾರ್ಚ್ 2018, 19:30 IST

ಕೇರಳದ ವಿಥುರಾದಲ್ಲಿ ಹಬ್ಬದ ನಿಮಿತ್ತ ಕಾಳಿ ದೇವಿಗೆ ಭಕ್ತಾದಿಗಳಿಂದ ಸಂಗ್ರಹಿಸಿದ ರಕ್ತದ ಅಭಿಷೇಕ ನಡೆಸುವುದಾಗಿ ಆ ದೇವಾಲಯದ ಆಡಳಿತ ಮಂಡಳಿ ನಿರ್ಧರಿಸಿರುವುದು ವರದಿಯಾಗಿದೆ.
ಇದೊಂದು ಅವೈಚಾರಿಕ, ಅನೈತಿಕ, ಅನಾರುಂಡತನದ ಕೆಲಸವಾಗಿದೆ. ರಕ್ತದ ಅಭಿಷೇಕ ಬಯಸುವದು ಅದೆಂಥ ದೇವರು? 21ನೇ ಶತಮಾನದ ಇಂದಿನ ವೈಜ್ಞಾನಿಕ– ವೈಚಾರಿಕ ಯುಗದಲ್ಲೂ ಇಂಥ ಆಚರಣೆ ಬೇಕೇ? ಇದು ಅನಾಗರಿಕ ಹಾಗೂ ಮೌಢ್ಯದ ಪರಮಾವಧಿ. ಅದರ ಬದಲು ರಕ್ತದ ಕೊರತೆಯಿಂದ ಬಳಲುವ ರೋಗಿಗಳಿಗೆ, ಅಪಘಾತಗಳಿಗೆ ಈಡಾದವರ ರಕ್ಷಣೆಗೆ ರಕ್ತದಾನ ಮಾಡಲಿ.

- ಆರ್.ಎಸ್. ಚಾಪಗಾವಿ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT