ಶಿಕ್ಷಣ ಇಲಾಖೆ ಈ ವರ್ಷ ಬರ ಪೀಡಿತ ಪ್ರದೇಶಗಳಲ್ಲಿ 1ರಿಂದ 8ನೇ ತರಗತಿಯವರೆಗಿನ ಮಕ್ಕಳಿಗೆ ಬೇಸಿಗೆ ರಜೆ ಅವಧಿಯಲ್ಲೂ ಬಿಸಿಯೂಟ ನೀಡಲು ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ ಶಾಲೆಗಳು ನಡೆಯುವ ಸಮಯದಲ್ಲೇ ಬಹುತೇಕ ಊರುಗಳಲ್ಲಿ ಮಕ್ಕಳು ಶಾಲೆಗೆ ಬರುತ್ತಿರಲಿಲ್ಲ.
ಇನ್ನು ರಜೆಯಲ್ಲಿ ಬಿಸಿಯೂಟಕ್ಕಾಗಿ ಶಾಲೆಗೆ ಹಾಜರಾಗುವ ಸಾಧ್ಯತೆ ಕಡಿಮೆ. ಬಡವರ ಮಕ್ಕಳು ಕೇವಲ ಊಟಕ್ಕಾಗಿ ಶಾಲೆಗೆ ಬರುತ್ತಾರೆ ಎಂದು ಸರ್ಕಾರ ಭಾವಿಸಿರುವುದು ನಿಜಕ್ಕೂ ದುರದೃಷ್ಟಕರ.
ಬಹುತೇಕ ಶಾಲೆಗಳಲ್ಲಿ ಬಿಸಿಯೂಟದ ಹೆಸರಿನಲ್ಲಿ ಕಳಪೆ ಊಟ ನೀಡುತ್ತಿರುವುದು ಗುಟ್ಟೇನಲ್ಲ. ಶಾಲೆಗಳ ಮುಖ್ಯಗುರುಗಳು, ಅಭಿವೃದ್ಧಿ ಸಮಿತಿಗಳ ಸದಸ್ಯರು ಮತ್ತು ಕೆಲ ಎನ್‌ಜಿಒಗಳು ಬಿಸಿಯೂಟದ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಕಡಿಮೆ ಮಕ್ಕಳಿದ್ದರೂ ಪೂರ್ಣ ಹಾಜರಿ ತೋರಿಸಿ ಹಣ ದುರುಪಯೋಗ ಮಾಡಿಕೊಳ್ಳುವುದು ಸರ್ಕಾರಕ್ಕೆ ಗೊತ್ತಿಲ್ಲವೇ? ರಜೆ ಅವಧಿಯಲ್ಲಿ ಬಿಸಿಯೂಟ ನೀಡುವ ನಿರ್ಧಾರದಿಂದ ಯಾರಿಗೆ ಲಾಭ ಆಗಬಹುದು? ಸರ್ಕಾರದ ಚಿಂತನೆ ಸರಿಯಾಗಿದ್ದರೂ ಜಾರಿಗೆ ಬಗ್ಗೆ ಜನರಿಗೆ ಸಂದೇಹಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.