ADVERTISEMENT

ರಸ್ತೆಬದಿ ನಿಲ್ಲಿಸಿರುವ ಟಿಪ್ಪರ್‌ಗಳನ್ನು ತೆರವುಗೊಳಿಸಿ

ಹೇಮಾ ತುಂಗಾನಗರ
Published 17 ಫೆಬ್ರುವರಿ 2014, 19:30 IST
Last Updated 17 ಫೆಬ್ರುವರಿ 2014, 19:30 IST

ಮಾಗಡಿ ಮುಖ್ಯರಸ್ತೆಯ ಹೇರೋಹಳ್ಳಿ ವಾರ್ಡ್‌ನ ತುಂಗಾನಗರ ರಸ್ತೆಯ ಬದಿಯಲ್ಲಿ ಬಿಬಿಎಂಪಿ ತ್ಯಾಜ್ಯ ಎತ್ತುವ ಐದು ಟಿಪ್ಪರ್‌ಗಳು ಅನಾಥವಾಗಿ ಬಿದ್ದುಕೊಂಡಿವೆ. ಬಿಬಿಎಂಪಿ ಮನೆಮನೆಯಿಂದ ಹಸಿ ಮತ್ತು ಒಣತ್ಯಾಜ್ಯ ಸಂಗ್ರಹಿಸುವ ಯೋಜನೆ ಹಮ್ಮಿಕೊಂಡ ನಂತರ ಈ ವಾಹನಗಳನ್ನು ರಸ್ತೆಯ ಬದಿಯಲ್ಲಿ ಹೀಗೆ ನಿಲ್ಲಿಸಲಾಗಿದೆ.

ಬಿಬಿಎಂಪಿ ನಷ್ಟದಲ್ಲಿದೆ ಎಂದು ಹೇಳುತ್ತಾ ಲಕ್ಷಾಂತರ ರೂಪಾಯಿ ಬೆಲೆಬಾಳುವ ಇಂತಹ ವಾಹನಗಳನ್ನು ಬಳಸದೇ ಮೂಲೆಗೆ ಎಸೆದರೆ ಆಗುವ ನಷ್ಟ ಕಡಿಮೆಯೇ? ಸಾರ್ವಜನಿಕ ಹಣವನ್ನು ಈ ರೀತಿ ಪೋಲು ಮಾಡುವ ಬದಲು ಸಮರ್ಪಕವಾಗಿ ಬಳಸಬೇಕು. ಅಲ್ಲದೆ ವಾಹನವನ್ನು ರಸ್ತೆ ಬದಿ ನಿಲ್ಲಿಸುವುದರಿಂದ ವಾಹನ ಸವಾರರಿಗೂ, ಪಾದಚಾರಿಗಳಿಗೂ ತೊಂದರೆಯಾಗುತ್ತಿದೆ. ಈ ರಸ್ತೆಯಲ್ಲಿ ಕಾವೇರಿ ಪೈಪ್‌ಲೈನ್‌ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಅದಕ್ಕೂ ಅಡಚಣೆಯಾಗುತ್ತಿದೆ. ಈಗಾಗಲೇ ಅರ್ಧ ವಾಹನ ಮಣ್ಣಿನಲ್ಲಿ ಹೂತು ಹೋಗಿದೆ.

ಇದರಿಂದ ವಾಹನ ಇನ್ನಷ್ಟು ಶಿಥಿಲಗೊಳ್ಳುವ ಸಾಧ್ಯತೆ ಇದೆ. ಟಿಪ್ಪರ್ ಸಂಪೂರ್ಣವಾಗಿ ಮಣ್ಣು ಪಾಲಾಗುವ ಮುನ್ನವೇ ಇಲ್ಲಿಂದ ತೆರವುಗೊಳಿಸುವಂತೆ ಪಾಲಿಕೆಯ ಅಧಿಕಾರಿಗಳಲ್ಲಿ ಮನವಿ ಮಾಡುತ್ತಿದ್ದೇನೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.