ADVERTISEMENT

ರಾಜಕೀಯವೇಕೆ?

ಸುದರ್ಶನ ಎಚ್.ಯಡಹಳ್ಳಿ
Published 20 ಸೆಪ್ಟೆಂಬರ್ 2015, 19:45 IST
Last Updated 20 ಸೆಪ್ಟೆಂಬರ್ 2015, 19:45 IST

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ‘ಸ್ವಚ್ಛ ಭಾರತ’ ಯೋಜನೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಾಣುತ್ತಿಲ್ಲ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಇದರ ಬಗ್ಗೆ ಕಾಳಜಿ ವ್ಯಕ್ತವಾದಂತೆ ಕಂಡರೂ ಉಳಿದೆಡೆ ಅಂತಹ  ಕಾಳಜಿ ಕಾಣುತ್ತಿಲ್ಲ.

ಬಿಜೆಪಿಯೇತರ  ಪಕ್ಷಗಳು ಆಡಳಿತದ ಚುಕ್ಕಾಣಿ ಹಿಡಿದಿರುವ ರಾಜ್ಯಗಳಲ್ಲಿ ಈ ಯೋಜನೆಗೆ ತುಂಬು ಮನಸ್ಸಿನಿಂದ  ಬೆಂಬಲ, ಸಹಕಾರ ದೊರೆತಂತೆ ಕಾಣುತ್ತಿಲ್ಲ. ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ವಿಷಯದಲ್ಲಿಯೂ ರಾಜಕಾರಣ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ.

ಇಂತಹ ರಾಜ್ಯಗಳಿಗೆ ಕರ್ನಾಟಕ ಮಾದರಿಯಾಗಲಿ. ಕರ್ನಾಟಕದಲ್ಲಿ ಅಂಥ ಕೆಟ್ಟ ರಾಜಕೀಯ ಇದ್ದಂತಿಲ್ಲ ಎಂಬುದು ಸಮಾಧಾನದ ಸಂಗತಿ. ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳಲ್ಲಿ ಪಕ್ಷಭೇದ ಮರೆತು ಎಲ್ಲರೂ ಕೈಜೋಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.