ಕೆಲವು ಬಾಬಾಗಳು, -ಸ್ವಾಮಿಗಳು ಕಾವಿ ಹೊದ್ದು ಸರ್ವಸಂಗ ಪರಿತ್ಯಾಗಿಗಳೆಂದು ಹೇಳಿಕೊಂಡರೂ ಅವರಿಗೆ ರಾಜಕೀಯ ಸಖ್ಯ ಇರುವುದನ್ನು ಬಹಿರಂಗವಾಗಿ ಅವರೇ ತೋರಿಸಿಕೊಳ್ಳುತ್ತಾರೆ.
ಅವರಲ್ಲಿ ಪ್ರಮುಖರು ಬಾಬಾ ರಾಮದೇವ್. ಅವರೊಂದಿಗೆ ಇನ್ನೂ ಹಲವರು ಸ್ವಾಮಿಗಳು ಇದ್ದಾರೆ. ಧರ್ಮ ಅಥವಾ ಭಾರತೀಯ ಸಂಸ್ಕೃತಿಯ ಹೆಸರಲ್ಲಿ ನಡೆಸುವ ಮಹೋತ್ಸವ, ರಾಷ್ಟ್ರೀಯತೆ ಜಾಗೃತಿಯ ನೆಪದಲ್ಲಿ ನಡೆಸುವ ಬೃಹತ್ ಸಭೆ ಸಮಾರಂಭಗಳ ಮೇಲೆಯೂ ಚುನಾವಣಾ ಆಯೋಗ ಕಣ್ಣು ಇಡಬೇಕಾದುದು ಅತೀ ಅಗತ್ಯ.
ರಾಮದೇವ್ ಅಂತೂ ತಮ್ಮ ಪ್ರತೀ ಸಭೆಯಲ್ಲೂ ಕಾಂಗ್ರೆಸ್ಸನ್ನು ನೇರವಾಗಿ ಹಳಿಯುವುದು ಮತ್ತು ಬಿಜೆಪಿ ಯನ್ನು ಹೊಗಳುವುದನ್ನು ಮರೆಯುವುದಿಲ್ಲ. ರಾಮದೇವ್ ಅವರ ‘ಭಾರತ್ ಸ್ವಾಭಿಮಾನ್ ಟ್ರಸ್ಟ್’ನ ಪತ್ರಿಕಾ ಪ್ರಕಟಣೆಯಲ್ಲಿ ಅವರೇ ಹೇಳಿಕೊಂಡಿರುವಂತೆ ಈ ತಿಂಗಳ 17 ರಿಂದ 23ರ ವರೆಗೆ ‘ಯೋಗ - ಸಪ್ತಾಹ ’ ನಡೆಸಿ ಅದರಲ್ಲಿ ಹತ್ತು ಕೋಟಿ ಜನರು ಭಾಗವಹಿಸಿ ನೂತನ ಚರಿತ್ರೆ ನಿರ್ಮಾಣ ಮಾಡಲಿದ್ದಾರಂತೆ.
ಅವರ ಪತಂಜಲಿ ಯೋಗ ಟ್ರಸ್ಟ್ ಸಹಾ ಇದರಲ್ಲಿ ಪಾಲುಗೊಳ್ಳಲಿದೆ. ಭಾರತ್ ಸ್ವಾಭಿಮಾನ್ ಟ್ರಸ್ಟ್ ಮತ್ತೂ ಪತಂಜಲಿ ಟ್ರಸ್ಟ್ ಇವೆರಡೂ ಬಿಜೆಪಿ ಪರ ಸಹಾನೂಭೂತಿ ಹೊಂದಿರುವಂತಹವೇ ! ಹಾಗಿರುವಾಗ ಲೋಕಸಭೆ ಚುನಾವಣೆ ವೇಳೆ ಇವರ ಬೃಹತ್ ಯೋಗ ಮತ್ತೂ ರಾಷ್ಟ್ರೀಯತೆ ಜಾಗೃತಿ ಸಪ್ತಾಹಗಳನ್ನು ಇಡೀ ದೇಶದಲ್ಲಿ ಆಯೋಜಿಸಿರುವುದು ಬಿಜೆಪಿಯ ಪರೋಕ್ಷ ಪ್ರಚಾರಕ್ಕೆ ಇರಬಹುದೇ? ಸಂಶಯ ಮೂಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.