ADVERTISEMENT

ರಾಷ್ಟ್ರೀಯ ನಮನ

ಪ್ರೊ.ಜಿ.ಎಚ್.ಹನ್ನೆರಡುಮಠ
Published 11 ಫೆಬ್ರುವರಿ 2016, 19:30 IST
Last Updated 11 ಫೆಬ್ರುವರಿ 2016, 19:30 IST


ಹನುಮ ವೀರನೆ ಭುವನ ಶೂರನೆ
ನಿನ್ನ ಜನಮ ಸಾರ್ಥಕಾ
ಹಿಮದ ಒಡಲಲಿ ಕಡಲು ಕೂಗಿತೆ
ಹೆತ್ತ ತಾಯಿಯೆ ಅದ್ಭುತಾ

ಬೆಟ್ಟದೂರಿನ ಗಟ್ಟಿ ಚೇತನ
ದಿಲ್ಲಿ ಕೂಗಿತು ಜೈ ಸಲಾಮ್
ನೆಲದ ಒಡಲಿನ ಅಗ್ನಿ ಚೀರಿತು
ತಾಯಿ ಭಾರತಿಗೆ ಸಲಾಮ್

ಧೀರ ಯೋಧನ ದೈತ್ಯ ಶಕ್ತಿಗೆ
ಭುವನ ಭಾರತಿ ಉಘೇ ಉಘೇ
ನೆಲದ ಮಣ್ಣಿನ ಸಿಡಿಲ ಕೆಂಡಕೆ
ಸಕಲ ಜನಮನ ಉಘೇ ಉಘೇ

ADVERTISEMENT

ನೀನು ಬಾಳಿದೆ ನಮ್ಮ ಎದೆಯಲಿ
ಇಕೋ ಕೋಟಿಯ ವಂದನೆ
ನೀನು ಬೆಳಗಿದೆ ಗಡಿಯ ಗುಡಿಯಲಿ
ವಿಶ್ವ ಭಾರತಿ ವಂದನೆ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.