ಲಗ್ಗೆರೆ 2008ರಲ್ಲಿ ಪಾಲಿಕೆ ವ್ಯಾಪ್ತಿಗೆ ಸೇರಿದ್ದರೂ ಚರಂಡಿ ವ್ಯವಸ್ಥೆಗಳು ಸರಿಯಾಗಿ ಆಗಿಲ್ಲ. ಹಲವು ಬಾರಿ ಬಿಬಿಎಂಪಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ರಸ್ತೆ ಕೆಲಸಗಳು ನಡೆಯುತ್ತಿದೆ. ನಂತರ ಸರಿಪಡಿಸುತ್ತೇವೆ ಎಂದು ಆಶ್ವಾಸನೆ ಕೊಡುತ್ತಾ ಬರುತ್ತಿದ್ದಾರೆ.ಪ್ರಸ್ತುತ 20ನೇ ಕ್ರಾಸ್ ರಾಜೇಶ್ವರಿ ನಗರ ಲಗ್ಗೆರೆಯಲ್ಲಿ ಚರಂಡಿಗಳಿಲ್ಲದೆ ಮಳೆ ಬಂದಾಗ ರಸ್ತೆಯ ಕಸವೆಲ್ಲ ಮನೆಯ ಮುಂದೆ ಬಂದು ನಿಂತು ಬಹಳ ತೊಂದರೆ ಅನುಭವಿಸುತ್ತಿದ್ದೇವೆ.
ರಸ್ತೆಗಳು ಡಾಂಬರಿಕರಣವಾದರೂ ಆಗಾಗ ರಸ್ತೆಯನ್ನು ಅಗೆಯುತ್ತಿರುವುದರಿಂದ ರಸ್ತೆಗಳು ಮೊದಲಿನ ಸ್ಥಿತಿಗೆ ಬಂದು ಮಳೆ ಬಂದರೆ ಮಣ್ಣಿನ ರಸ್ತೆಯಲ್ಲಿ ಓಡಾಡುವುದು ಬಹಳ ಪ್ರಯಾಸವಾಗಿದೆ. ಈ ಪತ್ರವನ್ನು ನೋಡಿಯಾದರೂ ಪಾಲಿಕೆ ಅಧಿಕಾರಿಗಳು ಕ್ರಮತೆಗೆದುಕೊಳ್ಳುತ್ತಾರೆಂಬ ನಂಬಿಕೆಯೊಂದಿಗೆ.
- ರಮಾ ಶ್ರೀನಿವಾಸ್ .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.