
ಆಂಧ್ರಹಳ್ಳಿ ಗ್ರಾಮದ ಎರಡನೇ ಹಂತದಲ್ಲಿರುವ ರಾಘವೇಂದ್ರನಗರದ ಮುಖ್ಯದ್ವಾರದ ಬಳಿ ಓವರ್‌ಹೆಡ್ ಟ್ಯಾಂಕ್ ಇದೆ. ಅಲ್ಲಿಂದ ತಗ್ಗಿನಲ್ಲಿ ಬಡಾವಣೆಗಳಿವೆ.
ಹಾಗಾಗಿ ಎಲ್ಲಾ ಬಡಾವಣೆಗಳಿಂದಲೂ ನೀರು ಪಂಪ್ ಮಾಡಿ ದೇವಸ್ಥಾನದ ಎದುರು ಭಾಗದ ರಾಘವೇಂದ್ರನಗರ, ಓಂಕಾರ ನಗರ, ವಿದ್ಯಾಮಾನ್ಯನಗರದ 5ನೇ ತಿರುವಿನವರೆಗೆ ವಾರಕ್ಕೆರಡು ದಿನ ನಿಗದಿ ಮಾಡಿ ನೀರು ಪೂರೈಕೆ ಮಾಡಬೇಕು. ಹೀಗೆ ಮಾಡುವ ಮೂಲಕ ನೀರಿನ ಕೊರತೆಯನ್ನು ನೀಗಿಸಬೇಕು ಎಂದು ಸಂಬಂಧಪಟ್ಟವರಲ್ಲಿ ಮನವಿ ಮಾಡುತ್ತಿದ್ದೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.