ADVERTISEMENT

ವಾಹನದಟ್ಟಣೆ ಪರಿಹರಿಸಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 19:59 IST
Last Updated 17 ಜೂನ್ 2013, 19:59 IST

ಬಾಪೂಜಿನಗರ-ಮೈಸೂರು ರಸ್ತೆಯ ಹೊಸ ಮೇಲುಸೇತುವೆ ಬಳಿ ಸದಾ ಅತೀವ ವಾಹನದಟ್ಟಣೆ ಇರುತ್ತದೆ. ಇದರಿಂದಾಗಿ ಪಾದಚಾರಿಗಳಿಗೆ ರಸ್ತೆ ದಾಟಲು ತುಂಬಾ ತೊಂದರೆಯಾಗುತ್ತಿದೆ. ಭರ್ರರೆಂದು ಚಲಿಸುವ ವಾಹನಗಳ ನಡುವೆ ಪಾದಚಾರಿಗಳು ಜೀವವನ್ನು ಕೈಯಲ್ಲಿ ಹಿಡಿದು ಓಡಾಡಬೇಕಾದ ಪರಿಸ್ಥಿತಿ ಇದೆ. ಅವಘಡ ಸಂಭವಿಸುವ ಮುನ್ನ ಸಂಬಂಧಪಟ್ಟವರು ಈ ಸಮಸ್ಯೆ ಪರಿಹರಿಸಲು ಗಮನಹರಿಸಬೇಕು.
-ಎಸ್.ರಮೇಶ್

ನೀರಿನ ಪೈಪ್ ದುರಸ್ತಿಗೊಳಿಸಿ
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇದಿನೇ ಹೆಚ್ಚುತ್ತಿದೆ. ಆದರೆ, ಇದಕ್ಕೆ ವ್ಯತಿರಿಕ್ತವೆಂಬಂತೆ ಕೆಲವೆಡೆ ನೀರು ಪೋಲಾಗುತ್ತಿದೆ. ನಂದಿನಿ ಬಡಾವಣೆಯ ಬಸ್ ನಿಲ್ದಾಣದ ಪಶ್ಚಿಮಕ್ಕೆ ಇರುವ ಸರ್ಕಾರಿ ಅಧಿಕಾರಿಗಳ ವಸತಿ ಸಮುಚ್ಚಯ ಹಾಗೂ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿಗಳ ವಸತಿಗಳ ಮಧ್ಯೆ 2ನೇ ಕ್ರಾಸ್ ಬಳಿ ನೀರು ಪೂರೈಕೆ ಪೈಪು ಹದಿನೈದು ದಿನಗಳ ಹಿಂದೆಯೇ ಒಡೆದು ದಿನವೂ ನೀರು ಹರಿದುಹೋಗುತ್ತಿದೆ.

ಈ ಬಗ್ಗೆ ಜಲಮಂಡಳಿಗೆ ಹಾಗೂ ಮಹಾನಗರ ಪಾಲಿಕೆಯ ಗಮನಕ್ಕೆ ತಂದು ಮನವಿ ಮಾಡಿಕೊಂಡಿದ್ದರೂ ಒಡೆದ ಪೈಪ್ ರಿಪೇರಿಗೆ ಕ್ರಮ ಜರುಗಿಸಿಲ್ಲ. ವಸತಿ ಗೃಹಗಳಲ್ಲಿ ಬ್ಯಾಂಕ್ ಹಾಗೂ ಸರ್ಕಾರಿ ಅಧಿಕಾರಿಗಳು ವಾಸಿಸುತ್ತಿದ್ದು, ಅವರು ಇದನ್ನು ಗಮನಿಸಿದಂತೆ ಕಾಣುವುದಿಲ್ಲ. ಹಾಗಾಗಿ ಸಂಬಂಧಪಟ್ಟವರು ಕೂಡಲೇ ಪೈಪ್ ದುರಸ್ತಿ ಮಾಡಿ ಅನಗತ್ಯವಾಗಿ ನೀರು ಪೋಲಾಗುವದನ್ನು ತಪ್ಪಿಸಬೇಕು.
-ಎಚ್.ಬಿ.ಶ್ವೇತಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.