ADVERTISEMENT

ವಿಳಂಬ ಗತಿ ಧೋರಣೆ ಬಿಡಿ

ಎ.ಕೆ.ಅನಂತಮೂರ್ತಿ.
Published 9 ಜುಲೈ 2012, 19:30 IST
Last Updated 9 ಜುಲೈ 2012, 19:30 IST

ಬಿ.ಬಿ.ಎಂ.ಪಿ.ಯವರು ಚರಂಡಿಯ ಹೂಳೆತ್ತುವ ಮತ್ತು ರಸ್ತೆ ಕಾಮಗಾರಿ ಮತ್ತಿತರ ನಾಗರಿಕ ಸೇವೆಗಳನ್ನು ಕೈಗೆತ್ತಿಕೊಂಡ ನಂತರ ನಿಗದಿತ ಸಮಯದಲ್ಲಿ ಮುಗಿಸುವುದೇ ಇಲ್ಲ. ಆ ಕೆಲಸಗಳನ್ನು ಕ್ರಮಬದ್ಧವಾಗಿ ಯೋಜಿತ ಕಾರ್ಯಕ್ರಮದಂತೆ ಕಾರ್ಯ ನಿರ್ವಹಿಸುವುದಿಲ್ಲ.

ನಡುನಡುವೆಯೇ ಕೆಲಸವನ್ನು ಸ್ಥಗಿತಗೊಳಿಸುತ್ತಾರೆ. ಅರೆ ಬರೆ ಕೆಲಸ ಹಾಗೆಯೇ ಉಳಿದಿರುತ್ತದೆ. ಚರಂಡಿಗಳ ಕೆಲಸ ಕೈಗೊಂಡಾಗ ಅದನ್ನು ತುರ್ತಾಗಿ ಮುಗಿಸುವುದೇ ಇಲ್ಲ. ಚರಂಡಿಯನ್ನು ಕೆಲಸ ಮುಗಿದ ಕೂಡಲೇ ಮುಚ್ಚುವುದೇ ಇಲ್ಲ. ಮ್ಯಾನ್ ಹೋಲ್‌ಗಳಿಂದ ತೆಗೆದ ತ್ಯಾಜ್ಯ ಅಲ್ಲಲ್ಲಿಯೇ ಚೆಲ್ಲಲಾಗುತ್ತದೆ.

ರಸ್ತೆ ಇಡೀ ದುರ್ಗಂಧ ಬೀರುತ್ತದೆ. ಮ್ಯಾನ್‌ಹೋಲ್ ಸ್ವಚ್ಛಗೊಳಿಸಿದಂತೆಯೇ ಸುತ್ತಲ ಪ್ರದೇಶವನ್ನೂ ಸ್ವಚ್ಛಗೊಳಿಸಬೇಕು ಅಲ್ಲವೇ?  ಕಸ ಸಾಗಿಸುವ ವಾಹನ ದಾರಿಯಲ್ಲಿ ಉದ್ದಕ್ಕೂ ಚೆಲ್ಲಿಕೊಂಡು ಹೋಗುವುದನ್ನು ತಪ್ಪಿಸಿ, ವಾಹನಕ್ಕೆ ಎರಡೂ ಕಡೆಗಳಲ್ಲಿ ತಡೆಗಳನ್ನು ಹಾಕಿ, ಕಸ ದಾರಿಯಲ್ಲಿ ಚೆಲ್ಲದಂತೆ ವ್ಯವಸ್ಥೆ ಮಾಡಬೇಕು.

ಇನ್ನು ಜಲಮಂಡಳಿಯವರು ನೀರು ಬಿಟ್ಟ ತಕ್ಷಣ ಎಲ್ಲಾದರೂ ಪೈಪು ಸೋರುತ್ತಿದ್ದರೆ, ಅದನ್ನು ಕೂಡಲೇ ನಿಲ್ಲಿಸಿ ಅಪಾರವಾಗಿ ಜಲ ಸೋರಿ ಹೋಗಿ ರಸ್ತೆಯೆಲ್ಲಾ ನೀರು ನಿಲ್ಲುವುದನ್ನು ತಪ್ಪಿಸಬೇಕು. ಈ ಮೂಲ ಸಮಸ್ಯೆಗಳ ನಿರ್ವಹಣೆ ಮತ್ತು ನಿವಾರಣೆಯನ್ನೂ ಸಾರ್ವಜನಿಕರೇ ಸೂಚಿಸಬೇಕೆ? ಇನ್ನಾದರೂ ಸೂಕ್ತ ಕ್ರಮಕೈಗೊಳ್ಳಿ ಎಂದು ಕೋರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.