ADVERTISEMENT

ವೋಟೂ ಪ್ರಾಸವಿನ್ಯಾಸವೂ!

​ಪ್ರಜಾವಾಣಿ ವಾರ್ತೆ
Published 8 ಜೂನ್ 2018, 19:30 IST
Last Updated 8 ಜೂನ್ 2018, 19:30 IST

‘ವೋಟಿಗಾಗಿ ಹಣ– ಲಿಕ್ಕರ್– ನಿಕ್ಕರ್– ಸೀರೆ ಹಂಚಲು ರೆಡಿ’ (ಪ್ರ.ವಾ., ಮೇ 30).

ಆಹಾ! ಎಂಥ ಪ್ರಾಸ ವಿನ್ಯಾಸ! ಇವುಗಳ ಜೊತೆಗೆ ‘ಕುಕ್ಕರ’ನೂ ಜೋಡಿಸಲಾಗಿದೆ. ಸ್ವಾರಸ್ಯವೆಂದರೆ, ‘ರೆಡಿ’ ಎಂದ ಆ ಚುನಾವಣಾ ಅಭ್ಯರ್ಥಿ ಒಬ್ಬರು ‘ರೆಡ್ಡಿ’! ಸರಿಹೋಯಿತು.

(ಪ್ರಾಚೀನ) ‘ಕನ್ನಡ ಕವಿಗಳು ಪ್ರಾಸಕ್ಕೆ ದಾಸರಾಗಿ ಭಾವಕ್ಕೆ ಸಾವು ತಂದರು’ ಎಂಬ ಪ್ರಾಸಬದ್ಧ ಟೀಕೆ ನೆನಪಾಗುತ್ತದೆ. ಮೇಲಿನ ಪ್ರಾಸ ವ್ಯವಸ್ಥೆಗೆ ‘ಸೀರೆ’ಯೊಂದು ಹೊರತು! ಆದರೆ (ನೀರೆಗೂ ಸೀರೆಗೂ ಸಂಬಂಧ ಉಂಟೇ ಉಂಟಲ್ಲ).

ADVERTISEMENT

ಪ್ರಾಸದ ವಿಷಯ ಹಾಗಿರಲಿ, ‘ನಿಕ್ಕರ್’ಗೆ ಸಂವಾದಿಯಾಗಿ ಹಂಚಬೇಕಾದ್ದು ‘ಸ್ಕರ್ಟ್’ನ್ನಲ್ಲವೆ? (ಒಂದು ವೇಳೆ ಷರಟು ಹಂಚುವುದಾದರೆ, ‘ಷರ್ಟು–ಸ್ಕರ್ಟು’ ಪ್ರಾಸಗಳಾಗುತ್ತವೆ.)

ನೋಟು–ವೋಟುಗಳ ಬಾಂಧವ್ಯ ಪ್ರಸಿದ್ಧವೇ (‘ನೋಟಾ’ವನ್ನೂ ಹೇಗೂ ಎಳೆದು ತರಬಹುದು).

ಒಟ್ಟಿನಲ್ಲಿ, ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂದಂತೆ, ಎಲ್ಲವೂ ವೋಟಿಗಾಗಿ, ಸ್ವಾಮಿ, ವೋಟಿಗಾಗಿ! ಏನೆಂದು ಬಣ್ಣಿಸಲಿ ನಿನ್ನ ಮಹಿಮೆಯ ಪರಿಯ, ವೋಟೇಶ್ವರಾ?

– ಸಿ.ಪಿ.ಕೆ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.