ADVERTISEMENT

ಶಾಸ್ತ್ರೀಯ ಸಂಗೀತ...

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 19:30 IST
Last Updated 5 ಮಾರ್ಚ್ 2018, 19:30 IST

ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ನಮ್ಮ ನಾಡಿನ ದಿಗ್ಗಜರು ನೀಡಿರುವ ಕೊಡುಗೆ ಅಪಾರ ಎಂಬುದು ಹೆಮ್ಮೆಯ ವಿಷಯ. ಆದರೆ, ಮೇಲ್ನೋಟಕ್ಕೇ ಗೋಚರವಾಗುವ ನಿರಾಸೆಯ ಸಂಗತಿ ಎಂದರೆ, ನಮ್ಮಲ್ಲಿ ಶಾಸ್ತ್ರೀಯ ಸಂಗೀತಾಸಕ್ತರ ಸಂಖ್ಯೆ ಕಡಿಮೆ, ತೀರಾ ಕಡಿಮೆ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ನಮ್ಮ ವಿದ್ವಾಂಸರು ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದರೂ ಫಲ ಮಾತ್ರ ನಿರೀಕ್ಷಿಸಿದಷ್ಟು ಸಿಕ್ಕಿಲ್ಲ. ಅದೇ ನಮ್ಮ ನೆರೆರಾಜ್ಯ ತಮಿಳುನಾಡಿನಲ್ಲಿ ಶಾಸ್ತ್ರೀಯ ಸಂಗೀತ ಚೆನ್ನಾಗಿ ನೆಲೆಯೂರಿದೆ. ರಾರಾಜಿಸುತ್ತಿದೆ.

ಇತ್ತೀಚೆಗೆ ನಮ್ಮಲ್ಲಿ ಚಲನಚಿತ್ರ ಸಂಗೀತ ಜನಪ್ರಿಯವಾಗುತ್ತಿರುವುದನ್ನು ಗಮನಿಸಬಹುದು. ಇದಕ್ಕೆ ಟಿ.ವಿ. ಚಾನೆಲ್‌ಗಳ ರಿಯಾಲಿಟಿ ಷೋಗಳು ಮುಖ್ಯ ಕಾರಣ. ಇದೇ ಮಾರ್ಗ ಅನುಸರಿಸಿ ಶಾಸ್ತ್ರೀಯ ಸಂಗೀತವನ್ನೂ ಜನಪ್ರಿಯಗೊಳಿಸಬಹುದು.

– ಬಿ.ಎಸ್. ರಮೇಶ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.