ADVERTISEMENT

ಶಿಕ್ಷಕರ ವರ್ಗಾವಣೆ ಕಡ್ಡಾಯವಾಗಲಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 19:30 IST
Last Updated 10 ಏಪ್ರಿಲ್ 2012, 19:30 IST

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ ತರಲು ನಾನಾ ಯೋಜನೆ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳುತ್ತಿದೆ. ಶಿಕ್ಷಕರಿಗೆ ನಾನಾ ರೀತಿಯ ತರಬೇತಿಗಳು ಹಾಗೂ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ.

ಇಷ್ಟಾದರೂ ಸರ್ಕಾರಿ ಶಾಲೆಗಳಲ್ಲಿ ನಿರೀಕ್ಷಿತ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಇದಕ್ಕೆ ಕಾರಣ ಶಿಕ್ಷಕರಲ್ಲಿಯ ನಿರುತ್ಸಾಹ, ಸಮರ್ಪಣಾ ಮನೋಭಾವದ ಕೊರತೆ ಮತ್ತು ನಿಷ್ಕ್ರಿಯತೆ.

ಬೋಧನಾ ವಿಧಾನದಲ್ಲಿ ಸುಧಾರಣೆ, ಗುಣಮಟ್ಟದ ಶಿಕ್ಷಣ ಹಾಗೂ ಶಾಲೆಗಳಲ್ಲಿ ಒಳ್ಳೆಯ ಕಲಿಕಾ ವಾತಾವರಣ ಸೃಷ್ಟಿಸಲು ಶಿಕ್ಷಕರನ್ನು ಒಂದು ನಿಗದಿತ ಸೇವಾ ಅವಧಿಯ ನಂತರ ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು.

ಒಂದು ಶಾಲೆಯಲ್ಲಿ ಒಬ್ಬ ಶಿಕ್ಷಕರಿಗೆ ಗರಿಷ್ಠ ಸೇವಾವಧಿ ನಿಗದಿ ಪಡಿಸಬೇಕು. ಈ ರೀತಿಯಾಗಿ ವರ್ಗಾವಣೆ ಕಡ್ಡಾಯ ಮಾಡುವುದರಿಂದ ಶಿಕ್ಷಕರಲ್ಲಿ ದಕ್ಷತೆ, ಉತ್ಸಾಹ ಹೆಚ್ಚಾಗುತ್ತದೆ. ಅವರು ಶಾಲೆಗೆ ಚಲನಶೀಲತೆಯನ್ನು ತರುತ್ತಾರೆ.
 
ಶಿಕ್ಷಕರಲ್ಲಿ ಸೀನಿಯರ್, ಜೂನಿಯರ್ ಎಂಬ ಭೇದ ಭಾವ ತೊಲಗಿ ಶಾಲೆಗಳು ಕ್ರಿಯಾಶೀಲವಾಗುತ್ತವೆ. ಶಿಕ್ಷಣದ ಗುಣಮಟ್ಟ ಸುಧಾರಿಸುತ್ತದೆ. ಸರ್ಕಾರ ಈ ನಿಟ್ಟಿನಲ್ಲಿಯೂ ಚಿಂತನೆ ನಡೆಸಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.