ADVERTISEMENT

ಶಿಸ್ತಿನ ಪಕ್ಷದ ತ್ರಾಸದ ಕೆಲಸ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ಈ ಚಿತ್ರ ನೋಡಿದಾಗ ಭಕ್ತಾದಿಗಳು ವೈಕುಂಠ ಏಕಾದಶಿ ದಿನ ಶ್ರೀನಿವಾಸ ದೇವಸ್ಥಾನದಲ್ಲಿ ಸ್ವರ್ಗದ ಬಾಗಿಲ ಕೆಳಗೆ ನುಸುಳಿಕೊಂಡು ಹೋಗುವುದನ್ನು ನೆನಪಿಗೆ ಬರುತ್ತದೆ ಅಲ್ಲವೇ!.

ಆದರೆ ಇಲ್ಲಿರುವುದು ಸ್ವರ್ಗದ ಬಾಗಿಲಲ್ಲ. ಬಿಬಿಎಂಪಿ ವಾರ್ಡ್ ಸಂಖ್ಯೆ 152 ಸುದ್ದುಗುಂಟೆ ಪಾಳ್ಯ ಬನ್ನೇರುಘಟ್ಟ ರಸ್ತೆಯ ಸಾಗರ್ ಮೋಟಾರ್ಸ್‌ ಹತ್ತಿರ  ಪಾಲಿಕೆ ಸದಸ್ಯರೊಬ್ಬರು ಗೌರಿ ಗಣೇಶ ಹಬ್ಬಕ್ಕೆ ಶುಭಾಶಯ ಕೋರಿ  ಪಾದಚಾರಿ ಮಾರ್ಗದಲ್ಲಿ ಹಾಕಿರುವ ಕಟೌಟ್. ಇದರಡಿ ಪಾದಚಾರಿಗಳು ಬಗ್ಗಿಕೊಂಡ ಹೋಗಬೇಕು.

ಬಿಜೆಪಿಯಂಥ ಶಿಸ್ತಿನ ಪಕ್ಷದ ಬಿಬಿಎಂಪಿ ಸದಸ್ಯರೊಬ್ಬರು ಈ ರೀತಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಕಟೌಟ್‌ಗಳನ್ನು ಹಾಕಿದರೆ ಹೇಗೆ? ಪಕ್ಷದ ಮುಖಂಡರಾದರೂ ಗಮನ ಹರಿಸಬಾರದೇ. ಹಾಕಿರುವ ಕಟೌಟ್‌ಅನ್ನು ಕೂಡಲೆ ತೆರವು ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.