ADVERTISEMENT

ಸಂಬಂಧಗಳ ಕೊಲೆಯಾಗದಿರಲಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ಮದುವೆ ಎಂಬ ಮೂರಕ್ಷರವು ಕೇವಲ ಎರಡೂ ಮನಸ್ಸನ್ನು ಜೋಡಿಸುವ ಕಾರ್ಯವಾಗಿರದೆ  ಅದು ಎರಡೂ ಕುಟುಂಬಗಳನ್ನು ಜೋಡಿಸುವ ಒಂದು ಶುಭ ಕಾರ್ಯವಾಗಿದೆ. ಆದರೆ ಈಗಿನ ಕಾಲದಲ್ಲಿ ಮದುವೆ ಎನ್ನುವುದು ಒಂದು ವ್ಯವಹಾರವಾಗಿದೆ. 

ಕಿರುತರೆ ನಟಿಯಾದ ಹೇಮಶ್ರೀಯ ಕಥೆಯನ್ನು ನೋಡಿದರೆ ಮದುವೆ ಹಾಗೂ ರಕ್ತ ಸಂಬಂಧಗಳ ಮೇಲಿನ ವಿಶ್ವಾಸ ಹೋದಂತಾಗಿದೆ. ಹೇಮಶ್ರೀಯ ಹೆತ್ತ ತಾಯಿಯೇ ಅವಳನ್ನು ನರಕಕ್ಕೆ ತಳ್ಳಿದಂತಾಯಿತು.  ಆದಕಾರಣ ಅವಳು ತನ್ನ ಜೀವನವನ್ನು ವಿನಾಕಾರಣ ಕಳೆದುಕೊಳ್ಳುವಂತಾಯಿತು? 

ಕಿರುತೆರೆ ನಟಿ ಅಥವಾ ಚಲನಚಿತ್ರ ನಟಿಯರ ಜೀವನವನ್ನೇ ಜನಸಾಮಾನ್ಯರು ಅನುಸರಿಸುತ್ತಾರೆ, ಇವರು ಆದರ್ಶಮಯ ಜೀವನ ಸಾಗಿಸುವದಕ್ಕೆ ಹೆಣಗುವ ಬದಲು ಯಾವುದೋ ವ್ಯಾಮೋಹಕ್ಕೆ ಒಳಗಾಗಿ ಹೆಣವಾಗುತ್ತಾರೆ ಇದು ನ್ಯಾಯವೇ!.

  ನನ್ನ ವಿನಂತಿ ಏನೆಂದರೆ ಹೆಣ್ಣು ಹೆತ್ತ ತಂದೆ  ತಾಯಂದಿರು ಹೆಣ್ಣು ಮನೆಗೆ ಶಾಪ ಅಥವಾ ಭಾರ ಎಂದು ತಿಳಿದುಕೊಳ್ಳದೇ ಅವಳಿಗೆ ಒಂದು ಒಳ್ಳೆಯ ಜೀವನಕೊಡಿ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.