ADVERTISEMENT

ಸಂಹಿತೆ ಉಲ್ಲಂಘನೆ ಅಕ್ಷಮ್ಯ

ಕೆ.ಎನ್.ಭಗವಾನ್
Published 11 ಜೂನ್ 2018, 20:15 IST
Last Updated 11 ಜೂನ್ 2018, 20:15 IST

ಭಾರತ ಸರ್ಕಾರದ ಅಧಿಕೃತ ‘ಆಚಾರ ಸಂಹಿತೆ’ (ಪ್ರೊಟೊಕಾಲ್– ಲೇಖಕ: ಎಸ್ ರಾಜಶೇಖರ್, ಹಿರಿಯನಿರ್ದೇಶಕರು, ತರಬೇತಿ ಮತ್ತು ಸಮನ್ವಯ, ಭಾರತ ಸರ್ಕಾರ) ಪ್ರಕಾರ, ಭಾರತದ ಮಾಜಿ ರಾಷ್ಟ್ರಪತಿ ಮೊದಲ್ಗೊಂಡು ಹಿರಿಯ ಸಾಂವಿಧಾನಿಕ ಸಂಸ್ಥೆಗಳ ಮುಖ್ಯಸ್ಥರು, ಸರ್ಕಾರಿ ಅಥವಾ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ, ಅವರು ಬಂದಾಗ ಮತ್ತು ನಿರ್ಗಮಿಸುವ ಮುಂಚೆ ರಾಷ್ಟ್ರಗೀತೆ ‘ಜನ ಗಣ ಮನ...’ ಹಾಡಿ ಗೌರವ ಸೂಚಿಸಬೇಕು. ಇದು ಕಡ್ಡಾಯ.

ಜೂನ್ 7ರಂದು ನಾಗಪುರದಲ್ಲಿ ನಡೆದ ಆರ್‌ಎಸ್‌ಎಸ್‌ನ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಬಂದಾಗ ಮತ್ತು ನಿರ್ಗಮಿಸಿದಾಗ ರಾಷ್ಟ್ರಗೀತೆಯನ್ನು ಹಾಡಲಿಲ್ಲ. ಇದು ಅತ್ಯಂತ ಹಿರಿಯ ಸಾಂವಿಧಾನಿಕ ಹುದ್ದೆಗೆ ಮಾಡಿರುವ ಅವಮಾನ.

ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಇದನ್ನು ಗಮನಿಸದಿರುವುದೇಕೆ? ಈ ಪ್ರಮುಖ ಆಚಾರ ಸಂಹಿತೆಯನ್ನು ಉಲ್ಲಂಘಿಸಿದವರ ವಿರುದ್ಧ ರಾಷ್ಟ್ರ ಗೌರವ ಉಲ್ಲಂಘನೆ ತಡೆ ಕಾನೂನಿನ ಸೆಕ್ಷನ್ 3ರ ಪ್ರಕಾರ ಕ್ರಮ ತೆಗೆದುಕೊಳ್ಳಬಹುದಾಗಿದೆ.

ADVERTISEMENT

ಪ್ರಣವ್‌ ಮುಖರ್ಜಿ ಅವರು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದುದನ್ನು ಗಮನಿಸಿದವರಿಗೆ, ಟೀಕಿಸಿದವರಿಗೆ ಮತ್ತು ಪತ್ರಿಕೋದ್ಯಮದ ಪಿತಾಮಹರಿಗೂ ಈ ಆಚಾರ ಸಂಹಿತೆಯ ಉಲ್ಲಂಘನೆ ಕಾಣಿಸಲಿಲ್ಲವೇಕೆ? ಈ ಲೋಪಕ್ಕೆ ಕಾರಣರಾರು? ಮಾಜಿ ರಾಷ್ಟ್ರಪತಿಯ ಕಾರ್ಯದರ್ಶಿಗಳೋ ಅಥವಾ ಸಂಘದ ಅಧಿಕಾರಿಗಳೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.