ADVERTISEMENT

ಸಮಯಕ್ಕೆ ಸರಿಯಾಗಿ ವಾಹನ ಬರಲಿ

ಜೆ.ಆರ್‌.ಆದಿನಾರಾಯಣ ಮುನಿ, ಬೆಂಗಳೂರು
Published 24 ನವೆಂಬರ್ 2014, 19:30 IST
Last Updated 24 ನವೆಂಬರ್ 2014, 19:30 IST

ಲಾಲ್‌ಬಾಗ್‌ ಮುಖ್ಯ ದ್ವಾರದಿಂದ ಉತ್ತರ ರಸ್ತೆ, ಆಶ್ರಮ, ಗಣೇಶ ಭವನ, ನಿರ್ಮಲ ಸ್ಟೋರ್ಸ್ ಹಾಗೂ ಹೊಸಕೆರೆಹಳ್ಳಿ ಕಡೆಗೆ ಸಂಚರಿಸುವ ಮಾರ್ಗ ಸಂಖ್ಯೆ ಕೆಂಪೇಗೌಡ ಬಸ್‌ ನಿಲ್ದಾಣದಿಂದ 36, 43 ಮತ್ತು 186. ಮೂರು ಕಡೆಯಿಂದ 34 ಮತ್ತು 37 ಇವುಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ.

ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಬಸ್‌ ನಿಲ್ದಾಣದಲ್ಲಿಯೇ ಕಾದು ಸುಸ್ತಾಗಬೇಕಾಗುತ್ತದೆ. ಆದ್ದರಿಂದ ಈ ಮೇಲಿನ ಮಾರ್ಗಗಳ ಬಸ್ಸುಗಳನ್ನು ಪ್ರತಿ 10–15 ನಿಮಿಷಗಳಿಗೆ ಒಂದರಂತೆಯಾದರೂ ಸಂಚರಿಸುವಂತೆ ಮಾಡಿದಲ್ಲಿ ಸದರಿ ಮಾರ್ಗದಲ್ಲಿನ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗುತ್ತದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.