ADVERTISEMENT

ಸಮರ್ಥನೀಯ ಅಲ್ಲ!

ಹುರುಕಡ್ಲಿ ಶಿವಕುಮಾರ
Published 28 ಫೆಬ್ರುವರಿ 2018, 19:38 IST
Last Updated 28 ಫೆಬ್ರುವರಿ 2018, 19:38 IST

ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 3,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಒಂದು ವರದಿ. ಆದರೆ ಸರ್ಕಾರಿ ಅಂಕಿಅಂಶಗಳ ಪ್ರಕಾರ ‘ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 2,667’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಹೇಳಿದ್ದಾರೆ! ಈ ಕುರಿತು ಮಾತನಾಡುವಾಗ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗ ಘಟಿಸಿದ ರೈತರ ಆತ್ಮಹತ್ಯೆ ಸಂಖ್ಯೆಯನ್ನು ಸಹ ಉಲ್ಲೇಖಿಸಿದ್ದಾರೆ.

ಈ ಥರದ ಉಲ್ಲೇಖ ಯಾವ ರೀತಿಯಿಂದಲೂ ಸಮರ್ಥನೀಯವಲ್ಲ.

ಸಾಲಮನ್ನಾ ಅಥವಾ ಬಡ್ಡಿರಹಿತ ಸಾಲಭಾಗ್ಯಗಳು ಸಹ ರೈತರ ಆತ್ಮಹತ್ಯೆಗೆ ಪರಿಹಾರವಲ್ಲವೆಂಬುದನ್ನು ಮುಖ್ಯಮಂತ್ರಿ ಮತ್ತು ಪ್ರಧಾನಿ ಮೊದಲು ಅರಿಯಬೇಕು. ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚ ಕಳೆದು ಶೇಕಡ 50ರ ವೈಜ್ಞಾನಿಕ ಬೆಂಬಲ ಬೆಲೆ ನೀಡುವುದರಿಂದ ಮಾತ್ರ ರೈತರ ಆತ್ಮಹತ್ಯೆಯನ್ನು ತಡೆಯಬಹುದೆಂದು ಸರ್ಕಾರವೇನೇಮಿಸಿದ ಆಯೋಗದ ವರದಿ ಹೇಳುತ್ತದೆ. ರಾಜಕಾರಣಿಗಳು ಈ ಕುರಿತು ಮಾತನಾಡಲಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.