ADVERTISEMENT

ಸರ್ಕಾರಿ ಸೀಟುಗಳ ಮಾರಾಟ ನಿಲ್ಲಲಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 19:30 IST
Last Updated 19 ಜೂನ್ 2011, 19:30 IST

ಇದೀಗ ತಾನೇ ಸಿಇಟಿ ಕೌನ್ಸೆಲಿಂಗ್ ಆರಂಭವಾಗಿದ್ದು ಅರ್ಹ ಅಭ್ಯರ್ಥಿಗಳು ಸೀಟು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.  ಉತ್ತಮ ರ‌್ಯಾಂಕ್ ಬಂದಿದ್ದರೂ ಇಂಜಿನಿಯರಿಂಗ್- ಮೆಡಿಕಲ್ ಸೀಟು ಆಯ್ಕೆ ಮಾಡದೇ ಬೇರೆಯದೇ ಕೋರ್ಸ್‌ಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಒಂದರಿಂದ ಮೂರು ಲಕ್ಷ ರೂಪಾಯಿಗಳ ಕೊಡುಗೆ ನೀಡುವ ಆಮಿಷ ಒಡ್ಡಿ,

ಪ್ರತಿಷ್ಠಿತ ಕಾಲೇಜ್ ಒಂದರಲ್ಲಿ ಸೀಟು ಆಯ್ಕೆ ಮಾಡಿಕೊಳ್ಳುವಂತೆ ಮಾಡಿ, ಕೌನ್ಸೆಲಿಂಗ್ ನಂತರ ನೀಡಲಾಗುವ ಗ್ರೀನ್ ಕಾರ್ಡ್ ಮತ್ತು ಕೋರ್ಸ್‌ಗೆ ಸೇರಲು ಇಷ್ಟವಿಲ್ಲ ಎಂಬ ನಿರಾಕರಣೆ ಪತ್ರವನ್ನು ಮಧ್ಯವರ್ತಿಗಳಿಗೆ ನೀಡುವಂತೆ ಮಾಡಿ, ಸರ್ಕಾರಿ ಕೋಟಾದ ಸೀಟನ್ನು ಖಾಸಗಿ ಕೋಟಾಗೆ ಬದಲಾಯಿಸಿಕೊಳ್ಳುವ ಅನೈತಿಕ ವ್ಯವಹಾರ ಆರಂಭವಾಗಿದೆ.

ವಿದ್ಯಾರ್ಥಿಗಳೇ, ದಯಮಾಡಿ ನಿಮ್ಮ ಸೀಟು ಮಾರಬೇಡಿ.  ಅನವಶ್ಯಕ ತೊಂದರೆಗೆ ಸಿಕ್ಕಿಕೊಳ್ಳಬೇಡಿ.  ಕಳೆದವರ್ಷ 5 ಸೀಟುಗಳು ಕ್ಯಾನ್ಸಲ್ ಆಗಿದ್ದು ಏಜೆಂಟರುಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ಬ್ಲಾಕ್ ಮಾಡಲಾದ ಸೀಟುಗಳು ಸರ್ಕಾರಕ್ಕೇ ಮರಳಿ ಹೋಗುತ್ತವೆ ಮತ್ತು ಹಾಗೆ ಮಾರಿಕೊಂಡ ವಿದ್ಯಾರ್ಥಿಯ ವಿವರಗಳನ್ನು ಸಿಇಟಿ ಬೋರ್ಡಿನಲ್ಲಿ ಪ್ರಕಟಿಸಲಾಗುತ್ತದೆ, ಅವರಿಗೆ ಬೇರೆ ಯಾವ ಕೋರ್ಸ್ ಸೇರುವ ಸಂದರ್ಭದಲ್ಲೂ ಈ ಅಂಶ ಗಮನಕ್ಕೆ ತೆಗೆದುಕೊಂಡು ಪ್ರವೇಶ ನಿರಾಕರಿಸುವ ಸಾಧ್ಯತೆ ಇದೆ~ ಎನ್ನುವ ನಿಯಮ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.