ADVERTISEMENT

ಸಾಮಾಜಿಕ ಜಾಲತಾಣಕ್ಕಿಂತ ಪ್ರಾಣ ಅಮೂಲ್ಯ

ಎಸ್.ರವಿ.
Published 10 ಜೂನ್ 2014, 19:30 IST
Last Updated 10 ಜೂನ್ 2014, 19:30 IST

ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗಿದ್ದ ಹೈದರಾಬಾದ್‌ನ ಎಂಜಿನಿಯರಿಂಗ್ ವಿದ್ಯಾರ್ಥಿಗಳು  ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಕ್ಕೆ ಕಾರಣಗಳು ಸಾಕಷ್ಟಿರಬಹುದು. ನದಿ ಪಾತ್ರದಲ್ಲಿ ಹತ್ತಿರದಿಂದ ಛಾಯಾಚಿತ್ರ ಕ್ಲಿಕ್ಕಿಸಿಕೊಳ್ಳಲು ಹೋಗಿದ್ದು ಒಂದು ಕಾರಣವಾಗಿದೆ.

ಅಪಾಯದ, ದುರ್ಗಮ ಸ್ಥಳಗಳಲ್ಲಿ ಛಾಯಾಚಿತ್ರ ಕ್ಲಿಕ್ಕಿಸುವ ಹವ್ಯಾಸ ಇತ್ತೀಚಿನ ಯುವ ಜನಾಂಗದಲ್ಲಿ ಹೆಚ್ಚು ಕಂಡುಬರುತ್ತಿದೆ. ಅದಕ್ಕೆ ಕಾರಣ ಆ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಹೆಚ್ಚು ಲೈಕ್ ಪಡೆಯುವ ತವಕ. 

ಯುವ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಲೈಕ್ ಪಡೆಯಲು ಅಪಾಯವನ್ನು ಲೆಕ್ಕಿಸದೆ ಇರುವುದು ಸರಿಯಲ್ಲ.  ಹುಚ್ಚು ಸಾಹಸದಿಂದ ಅವರನ್ನು ನಂಬಿರುವ ಪೋಷಕರನ್ನು  ದುಃಖಕ್ಕೆ ದೂಡುವುದು ತಪ್ಪು.
– ಎಸ್.ರವಿ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.