ಮದುವೆ ಎಂಬುದು ಜೀವನದ ಒಂದು ಪ್ರಮುಖ ಘಟ್ಟದಲ್ಲಿ ಬರುವ ಮಧುರ ಬಂಧನ. ಇಂತಹ ಅಮೃತ ಘಳಿಗೆಯನ್ನು ಹೊಲಸಾಗಿ ಮಾಡಿಕೊಂಡು ಬೀಗುವ ಮನುಷ್ಯನ ವರ್ತನೆ, `ವಿನಾಶಕಾಲೆ ವಿಪರೀತ ಬುದ್ಧಿ' ಎಂಬಂತಾಗಿದೆ.
ಬೆಂಗಳೂರಿನಲ್ಲಿ ನಡೆದ ಇತ್ತೀಚಿನ ಸಾಮೂಹಿಕ ವಿವಾಹವೊಂದರಲ್ಲಿ ಹಣದಾಸೆಗೆ ಮಾತೆ ಸ್ವರೂಪಿಣಿ ಅತ್ತಿಗೆಯನ್ನೇ ವರಿಸಿದ ಮತಿಹೀನ ಭೂಪ, ಮಾತೆಯ ಸ್ಥಾನವನ್ನೇ ಮಾರಿಕೊಂಡ ಅತ್ತಿಗೆ ಅನ್ನಿಸಿಕೊಂಡವಳ ಸಾಹಸ ಸಮಾಜಕ್ಕೇ ಒಂದು ಕಂಟಕ.
ಅದೆಷ್ಟೋ ಸಂಬಂಧಗಳು ಇಂದು ಕೇವಲ ಹಣಕ್ಕಾಗಿ ಮಾರಿಹೋಗುತ್ತಿವೆ.
ಬಹುದಿನಗಳ ಬಾಂಧವ್ಯ, ಮದುವೆಯ ಸಂಬಂಧಗಳು ವ್ಯಾಪಾರೀಕರಣಕ್ಕೆ ಒಳಪಟ್ಟು ಹಣದ ವ್ಯವಹಾರಗಳಾಗಿ ಮಾರ್ಪಡುತ್ತಿವೆ ಎಂಬುದಕ್ಕೆ ಇಂತಹ ಘಟನೆಗಳೇ ಸಾಕ್ಷಿ.
ಮನುಷ್ಯ ತನ್ನ ಬದುಕಿನ ಅರ್ಥವನ್ನೇ ಕಳೆದುಕೊಂಡು ಹೀಗೆ ವರ್ತಿಸುತ್ತಿರುವುದು ಇಂದು ಸಮಾಜದಲ್ಲಿ ಎಗ್ಗಿಲ್ಲದೆ ಕಂಡುಬರುತ್ತಿದೆ. ಅವನ ಈ ವಿಕೃತ ಮನಸ್ಸಿಗೆ ಕಡಿವಾಣವಾದರೂ ಹೇಗೆ? ಅದು ಯಾರಿಂದ? ಇದರಿಂದ ಸಮಾಜಕ್ಕೆ ಅವನ ಸಂದೇಶವಾದರು ಏನು? ಇಂಥವರಿರುವ ತನಕ ಕುಟುಂಬಕ್ಕೆ, ಉತ್ತಮ ಸಮಾಜಕ್ಕೆ ಶಾಂತಿ, ನೆಮ್ಮದಿಯಾದರು ಎಲ್ಲಿಂದ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.