ADVERTISEMENT

ಸಿಗ್ನಲ್, ನಿಲುಗಡೆ ಬೇಕು

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 19:59 IST
Last Updated 24 ಜೂನ್ 2013, 19:59 IST

ಬೆಂಗಳೂರು-ಮೈಸೂರು ಮಾರ್ಗದ ಕುಂಬಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಮೋಹಳ್ಳಿ ಕ್ರಾಸ್ ಇದೆ. ಪ್ರವಾಸಿ ತಾಣ ದೊಡ್ಡ ಆಲದ ಮರಕ್ಕೆ, ಇನ್ನೂ ಅನೇಕ ಹಳ್ಳಿಗಳಿಗೆ ಹೋಗುವ ಮಾರ್ಗವಿದು. ಡಾನ್ ಬಾಸ್ಕೊ, ರಾಜರಾಜೇಶ್ವರಿ, ದಿ ಪ್ರಿಂಟರ್ಸ್‌ (ಮೈಸೂರು) ಪ್ರೈ. ಲಿ. ಮತ್ತಿತರ ಅನೇಕ ಪ್ರಮುಖ ಕಾರ್ಖಾನೆಗಳಿರುವುದರಿಂದ ಈ ಜಾಗದಲ್ಲಿ ಹೆಚ್ಚಿನ ಜನರು ಸಂಚರಿಸುತ್ತಿದ್ದಾರೆ.

ಇಲ್ಲಿನ ಮುಖ್ಯ ಸಮಸ್ಯೆ- ರಾಮೋಹಳ್ಳಿ ಕ್ರಾಸ್ ಜಾಗದಲ್ಲಿ ಸರಿಯಾದ ರೀತಿಯಲ್ಲಿ ಟ್ರಾಫಿಕ್ ಸಿಗ್ನಲ್ ಅಥವಾ ಸಂಚಾರಿ ಪೊಲೀಸರು ಇಲ್ಲದಿರುವುದು. ಇದರಿಂದ ಅನೇಕ ರಸ್ತೆ ಅಪಘಾತಗಳು ನಿತ್ಯವೂ ಘಟಿಸುತ್ತಲೇ ಇವೆ. ಮೈಸೂರಿನಿಂದ ಬರುವ ಪ್ರಯಾಣಿಕರನ್ನು ಸರ್ಕಾರಿ ಬಸ್‌ಗಳಾಗಲೀ ಅಥವಾ ಖಾಸಗಿ ಬಸ್‌ಗಳಾಗಲೀ ಇಲ್ಲಿ ಇಳಿಸುವುದಿಲ್ಲ. ಬಸ್‌ಗಳ ನಿಲುಗಡೆ ಇಲ್ಲದಿರುವುದು ಇನ್ನೊಂದು ಸಮಸ್ಯೆಯಾಗಿದೆ. ಸಂಬಂಧಪಟ್ಟ ಮೇಲಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಈ ಸಮಸ್ಯೆಗಳನ್ನು ನಿವಾರಿಸಬೇಕಾಗಿ ಮನವಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.