ಇಂದು ಅನೇಕ ಮುಖಂಡರು, ಸ್ವಾಮೀಜಿಗಳು ಸಾಧನ ಜೀವಿಗಳಾಗದೆ ಸುದ್ದಿಜೀವಿಗಳಾಗಿದ್ದಾರೆ. ಯಾವುದೇ ವಿಚಾರವಾಗಿಯಾದರೂ ಸುಮ್ಮನೆ ಗಂಟೆಗಟ್ಟಲೆ ಚರ್ಚೆ, ಸುದ್ದಿಗೋಷ್ಠಿ ನಡೆಸುವುದು ಸಾಮಾನ್ಯವಾಗಿದೆ. ಸ್ವಾಮಿ ವಿವೇಕಾನಂದರು ಒಮ್ಮೆ ಈ ರೀತಿ ಹೇಳಿದ್ದರು.
‘ಹಸಿದವರಿಗೆ ಒಂದು ತುತ್ತು ಅನ್ನ ಕೊಡದ, ವಿಧವೆಯರ ಕಣ್ಣೀರು ಒರೆಸದ ಯಾವ ಧರ್ಮ, ದೇವರಲ್ಲೂ ನಂಬಿಕೆ ಇಲ್ಲ’ ಎಂದು. ಒಂದು ವಿವಾದಿತ ಹೇಳಿಕೆ ಕೊಡುವುದು, ವಿವಾದಿತ ಹೇಳಿಕೆ ಪರ---- ವಿರುದ್ಧ ಚರ್ಚೆ, ಪ್ರತಿಭಟನೆ ಮಾಡುವುದು ಒಂದು ಫ್ಯಾಷನ್ ಆಗಿದೆ.
–ಎಂ.ಪರಮೇಶ್ವರ, ಮದ್ದಿಹಳ್ಳಿ, ಹಿರಿಯೂರು ತಾಲ್ಲೂಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.