ADVERTISEMENT

ಸುಧಾರಣೆಯ ಹೊಣೆ ಜನರೇ ಹೊರಬೇಕಿಲ್ಲ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 19:30 IST
Last Updated 18 ಅಕ್ಟೋಬರ್ 2012, 19:30 IST

ದೇಶದ ಆರ್ಥಿಕ ಸುಧಾರಣೆಯ ಕ್ರಮಗಳನ್ನು ಕೈಗೆತ್ತಿಕೊಂಡಿರುವ ಕೇಂದ್ರ ಸರ್ಕಾರ ಅದಕ್ಕಾಗಿ ಬಹಳಷ್ಟು ಹೆಣಗಾಡುತ್ತಿದೆ. ಗೃಹಬಳಕೆಯ ಅಡುಗೆ ಅನಿಲದ ಸಬ್ಸಿಡಿ ಸಹಿತದ ಸಿಲಿಂಡರ್‌ಗಳ ಸಂಖ್ಯೆಯನ್ನು ವಾರ್ಷಿಕ ಕೇವಲ ಆರಕ್ಕೆ ಮಿತಿಗೊಳಿಸಿದೆ. ಇನ್ನುಳಿದಂತೆ ಆರಕ್ಕಿಂತ ಹೆಚ್ಚಿಗೆ ಬೇಕಿದ್ದಲ್ಲಿ ಮಾರುಕಟ್ಟೆ ದರದಲ್ಲಿ ಕೊಂಡುಕೊಳ್ಳಬೇಕಾಗಿಯೂ, ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದೂ ಸ್ಪಷ್ಟಪಡಿಸಿದೆ.
 
ಆರ್ಥಿಕ ಸ್ಥಿತಿವಂತರು ಮಾರುಕಟ್ಟೆ ದರದಲ್ಲಿ ಅದು ಸಾವಿರವಲ್ಲ ಎರಡು ಸಾವಿರವಾದರೂ ಕೊಂಡುಕೊಳ್ಳಬಲ್ಲರು. ಆದರೆ ದೇಶದ ಬಹುಪಾಲು ಜನ ಬಡವರು, ಮಧ್ಯಮ ವರ್ಗದವರು. ಏನೇ ಮಾಡಿದರೂ ಗೃಹ ಬಳಕೆಗಾಗಿ ವಾರ್ಷಿಕ ಆರು ಸಿಲಿಂಡರ್‌ಗಿಂತಲೂ ಹೆಚ್ಚು ಅವಶ್ಯಕತೆ ಬಿದ್ದೇ ಬೀಳುತ್ತದೆ.
 
ಆದರೆ ನಿರ್ಧಾರ ಸ್ಪಷ್ಟಪಡಿಸಿ ಮುಗುಮ್ಮಾಗಿರುವ ಕೇಂದ್ರ ಪರ್ಯಾಯ ಮಾರ್ಗಗಳನ್ನು ಹೇಳಿಲ್ಲ. ಸೌರಒಲೆಗಳನ್ನು ಬಳಸುವಂತೆಯೂ ಜಾಗೃತಿ ಮೂಡಿಸಿಲ್ಲ. ಆರ್ಥಿಕತೆ ಸುಧಾರಣೆ ಮಾಡಲು ಹೊರಟಿರುವ ಕೇಂದ್ರ ಅದಕ್ಕಾಗಿ ಸಾಮಾನ್ಯ ಜನತೆಯ ಜೀವನವನ್ನು ಕಸಿಯುತ್ತದೆ. ಆರ್ಥಿಕ ಸುಧಾರಣೆಗೆ ಇದೊಂದೇ ಮಾರ್ಗವಲ್ಲ.ಪ್ರತಿಬಾರಿಯೂ ಸುಧಾರಣೆಯ ಹೊಣೆಯನ್ನು ದೇಶದ ಜನರೇ ಹೊರಬೇಕಿಲ್ಲ ಎಂಬುದನ್ನು ಕೇಂದ್ರ ಅರಿಯಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.