ADVERTISEMENT

ಸೌಲಭ್ಯಗಳಿಲ್ಲದ ಹೆದ್ದಾರಿ

ಶ್ರೀಮತಿ ಸುಬ್ರಮಣ್ಯಂ, ಬೆಂಗಳೂರು
Published 27 ಡಿಸೆಂಬರ್ 2012, 19:59 IST
Last Updated 27 ಡಿಸೆಂಬರ್ 2012, 19:59 IST

ನಮ್ಮ ಕರ್ನಾಟಕದ ಹೆದ್ದಾರಿಗಳಲ್ಲಿ ಸ್ತ್ರೀಯರಿಗೆ, ವೃದ್ಧರಿಗೆ ಪ್ರಯಾಣವೆಂದರೆ ಭಯಪಡುವಂತಾಗಿದೆ. ಏಕೆಂದರೆ ಎಲ್ಲೂ ಸರಿಯಾದ ಶೌಚಾಲಯಗಳ ವ್ಯವಸ್ಥೆ ಇಲ್ಲ. ಸ್ವಂತ ವಾಹನಗಳಲ್ಲಿ ಓಡಾಡುವವರೂ ಪೆಟ್ರೋಲ್ ಬಂಕ್, ಅಥವಾ ಯಾವುದಾದರೂ ಬಸ್ ಸ್ಟಾಪ್, ಹೋಟೆಲ್ ಹುಡುಕಿಕೊಂಡು ಹೋಗಬೇಕು.

ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಶೌಚಾಲಯವೂ ಒಂದು. ಪುಣೆ ಹೆದ್ದಾರಿಯಲ್ಲಿ ಒಂದೊಂದು ಚೆಕ್ ಪೋಸ್ಟ್, ಟೋಲ್‌ಗೇಟ್‌ಗಳಲ್ಲೂ ಒಂದೊಂದು ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇರುತ್ತದೆ. ನಮ್ಮಲ್ಲಿ ಕೂಡ ಅಂತಹ ವ್ಯವಸ್ಥೆ ಆಗಬೇಕು. ಸಂಬಂಧಪಟ್ಟವರು ಗಮನಿಸುತ್ತಾರೆಂದು ನಂಬೋಣವೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.