2009ರಲ್ಲಿ ಚಿತ್ರದುರ್ಗದಲ್ಲಿ ನಡೆದ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಗಳು ಓದುಗರಿಗೆ ಇದುವರೆವಿಗೂ ತಲುಪಿಲ್ಲ. ಪ್ರತಿ ವರ್ಷದ ಸಾಹಿತ್ಯ ಜಾತ್ರೆಯಲ್ಲಿ ವಿಚಾರಿಸಿದಾಗ ಇನ್ನೂ ಬಂದಿಲ್ಲವೆಂಬ ಉತ್ತರ ಬರುತ್ತದೆ. ಚಿತ್ರದುರ್ಗದಲ್ಲಿ ನಡೆದ ಸಮ್ಮೇಳನಕ್ಕಿಂತ ನಂತರದ ಸಂಚಿಕೆಗಳು ಕನ್ನಡ ಸಾಹಿತ್ಯ ಪರಿಷತ್ ಬಳಿ ಲಭ್ಯವಿದ್ದು ಅಮೃತಮಹೋತ್ಸವದ ಸ್ಮರಣಸಂಚಿಕೆ ಈ ಬಾರಿಯೂ ಓದುಗರಿಗೆ ಲಭ್ಯವಾಗಿಲ್ಲ.
ಕಾರಣ ವಿಚಾರಿಸಿದಾಗ ಕಸಾಪ ಕೇಂದ್ರ ಸಮಿತಿಯು: ‘ಸ್ಮರಣಸಂಚಿಕೆಯನ್ನು ಮುದ್ರಿಸಿ ಕಳುಹಿಸುವುದು ಅಲ್ಲಿಯ ಜಿಲ್ಲಾ ಸಮಿತಿಯ ಜವಾಬ್ದಾರಿ. ಅವರು ಕಳುಹಿಸಿಕೊಟ್ಟರೆ ಮಾತ್ರ ನಾವು ಮಾರಾಟ ಮಾಡಲು ಸಾಧ್ಯ’ ಎಂದು ತಿಳಿಸಿದೆ. ಸಮ್ಮೇಳನ ನಡೆದು 5 ವರ್ಷಗಳೇ ಸಂದರೂ ಆಸಕ್ತರಿಗೆ ಸಂಚಿಕೆಗಳು ಲಭ್ಯವಾಗದಿರುವುದು ದುರದೃಷ್ಟಕರ. ಸ್ಮರಣ ಸಂಚಿಕೆಗಳು ಕೇವಲ ಆಯ್ದ ಕೆಲವರ ಬಳಿ ಇದ್ದರೆ ಸಾಕೆ? ಆಸಕ್ತ ಓದುಗರಿಗೆ ಇವು ಸಿಗಬಾರದೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.