ADVERTISEMENT

ಸ್ವಾಯತ್ತತೆ ನಿರೀಕ್ಷಿಸುವುದು ಕಷ್ಟ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 19:59 IST
Last Updated 24 ಜೂನ್ 2013, 19:59 IST

ಪ್ರಜಾವಾಣಿಯ `ಸಂಗತ'ದಲ್ಲಿ ಪ್ರಕಟವಾದ ಕಾ.ತ. ಚಿಕ್ಕಣ್ಣ ಅವರ ಪತ್ರ (ಜೂನ್ 18) ಓದಿದೆ. ಸರ್ಕಾರದ ಅಧೀನದಲ್ಲಿದ್ದು ಸಾಂಸ್ಕೃತಿಕ ಕೆಲಸಗಳನ್ನು ಮಾಡುತ್ತಿರುವ ಸಂಸ್ಥೆಗಳಿಗೆ ಸ್ವಾಯತ್ತತೆ ಇಲ್ಲದಿರುವುದರ ಬಗ್ಗೆ, ಇವು ಸರ್ಕಾರದ ಹಿಡಿತದಿಂದ ಮುಕ್ತವಾಗಬೇಕೆಂಬ ಸಲಹೆ ಬಗ್ಗೆ ನನ್ನ ಎರಡು ಮಾತು.

ಚಿಕ್ಕಣ್ಣ ಅವರು ಹೇಳುವಂತೆ ವಿಧಾನಸೌಧದ ಸುತ್ತ `ಪ್ರದಕ್ಷಿಣೆ' ಹಾಕುವ ಜನ ಎಲ್ಲಿವರೆಗೆ ಇರುತ್ತಾರೋ ಅಲ್ಲಿವರೆಗೂ ಇಂಥ ಸಂಸ್ಥೆಗಳಿಗೆ ಸ್ವಾಯತ್ತತೆ ಬರುವುದಿಲ್ಲ. ಮಂತ್ರಿಮಹೋದಯರ ಚೇಲಾಗಳೇ ಇಂಥ ಕಡೆ `ಜೀ ಹುಜೂರ್' ಅಂಥ ಕೂತಿರುತ್ತಾರೆ. ಅಂಥ ಕಡೆ ಆತ್ಮಸಾಕ್ಷಿ, ಸ್ವಾಯತ್ತತೆ ನಿರೀಕ್ಷಿಸುವುದು ಕಷ್ಟ.

ಮತ್ತೆ ಅವರು ಹೇಳುವ, `ಇವತ್ತಿನ ತುರ್ತು ಎಂದರೆ ಮೊದಲು ನಮ್ಮನ್ನು ನಾವು ಸಾಂಸ್ಕೃತಿಕವಾಗಿ ಉಳಿಸಿಕೊಳ್ಳಬೇಕು' ಎಂಬ ಅವರ ಮತ್ತೊಂದು ಮಾತನ್ನು ಎಷ್ಟು ಜನ ಅನುಸರಿಸುತ್ತಾರೆ. ಯಾಕೆಂದರೆ ಸ್ವತಃ ಚಿಕ್ಕಣ್ಣ ಅವರೇ ಈ ಮಾತನ್ನು ಅನುಸರಿಸಲು ಆಗಿಲ್ಲ.
-ಕೊಟ್ರಬಸಪ್ಪ, ಹೊಸಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.