ADVERTISEMENT

ಹಾನಿಕಾರಕ ವಸ್ತು ನಿಷೇಧಿಸಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 19:30 IST
Last Updated 10 ಏಪ್ರಿಲ್ 2012, 19:30 IST

ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾದ ಎಲ್ಲ ರೀತಿಯ ಪದಾರ್ಥಗಳ ತಯಾರಿಕೆಯನ್ನು ಮತ್ತು ಮಾರಾಟವನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಬೇಕು.

ಬೀಡಿ, ಸಿಗರೇಟು, ಪಾನ್ ಪರಾಗ್, ಜರ್ದಾ, ಗುಟ್ಕಾಗಳ ಸೇವನೆಯಿಂದ ಮನುಷ್ಯನ ಆರೋಗ್ಯವು ಕೆಡುತ್ತದೆ. ಮದ್ಯ ಸೇವನೆಯಿಂದ ಆರೋಗ್ಯವು ಸಂಪೂರ್ಣವಾಗಿ ಕೆಡುತ್ತದೆ, ಮಾತ್ರವಲ್ಲ, ಅದು ಸಮಾಜವನ್ನೇ ಕೆಡಿಸುತ್ತದೆ. ಇವುಗಳನ್ನು ನಿಷೇಧಿಸುವುದರಿಂದ ಉಂಟಾಗುವ ಬಾಧಕಗಳನ್ನು ನಿರ್ಲಕ್ಷಿಸಬೇಕು; ಸಮಾಜಕ್ಕಾಗಿರುವ ಒಳಿತನ್ನು ಪರಿಗಣಿಸಬೇಕು.
 
ಮಧ್ಯಪ್ರದೇಶ ಸರ್ಕಾರ ಗುಟ್ಕಾದ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸಿದ ಪ್ರಥಮ ರಾಜ್ಯವೆನಿಸಿದೆ. ಕರ್ನಾಟಕ ಸರ್ಕಾರವು ಈ ಹಾದಿಯಲ್ಲಿ ಮುನ್ನಡೆಯಲು ಅಡ್ಡಿ ಏನು? 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.