ADVERTISEMENT

ಬಯಸಿದಂತೆ ಬದುಕಿದವರು

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 20:00 IST
Last Updated 13 ಜೂನ್ 2019, 20:00 IST

ಗಿರೀಶ ಕಾರ್ನಾಡರ ಅಗಲಿಕೆಯಿಂದ ಒಂದು ಅರ್ಥಪೂರ್ಣ ಮತ್ತು ಸಾಂಸ್ಕೃತಿಕ ಕೊಂಡಿಯೊಂದು ಕಳಚಿಹೋದಂತಾಗಿದೆ. ಅವರ ಚಿಂತನೆಗಳು ಮತ್ತು ಜೀವನಶೈಲಿಯು ವೈಚಾರಿಕ ಪ್ರಜ್ಞೆಯುಳ್ಳ ಅನೇಕ ಜನರಿಗೆ ಆದರ್ಶಪ್ರಾಯವಾಗಿತ್ತು. ಅವರು, ಬರೆದಂತೆ ಮತ್ತು ಬಯಸಿದಂತೆ ಬದುಕಿದರು. ನಮ್ಮಲ್ಲಿ ಬುದ್ಧಿಜೀವಿಗಳು ಎಂದು ಬಿಂಬಿತರಾಗಿರುವ ಅನೇಕರಿಗಿಂತ ಕಾರ್ನಾಡರು ವಿಭಿನ್ನವಾಗಿ ಬದುಕಿದರು. ಅಂತಿಮ ಸಂಸ್ಕಾರದ ವೇಳೆ, ಸರ್ಕಾರಿ ಗೌರವವನ್ನು ನಿರಾಕರಿಸುವ ಮೂಲಕ ನಿಜವಾದ ವೈಚಾರಿಕ ಪ್ರಜ್ಞೆಯನ್ನು ಅವರ ಕುಟುಂಬ ಮೆರೆದಿದೆ. -ಡಾ. ಜಿ.ಡಿ.ರಾಘವನ್‌, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.