ADVERTISEMENT

ಬೆದರಿಕೆ ಒಡ್ಡುವಂತಿದೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2019, 20:45 IST
Last Updated 14 ಫೆಬ್ರುವರಿ 2019, 20:45 IST

16ನೇ ಲೋಕಸಭೆಯ ತಮ್ಮ ಕೊನೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅತಂತ್ರ ಜನಾದೇಶ ಬಂದರೆ ಜಾಗತಿಕವಾಗಿ ದೇಶದ ವರ್ಚಸ್ಸಿಗೆ ಧಕ್ಕೆ ಎಂದಿದ್ದಾರೆ.

(ಪ್ರ.ವಾ., ಫೆ. 14). ಮುಂದಿನ 50 ವರ್ಷ ತಮ್ಮ ಪಕ್ಷದ್ದೇ ಆಡಳಿತ ಎಂದು ಅತಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದವರ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿನ ಇಂಥ ಮಾತು ಅವರ ಹತಾಶೆಯನ್ನು ಬಿಂಬಿಸುತ್ತಿದೆಯಲ್ಲದೆ ಪ್ರಜೆಗಳಿಗೆ ಬೆದರಿಕೆಯನ್ನೂ ಒಡ್ಡುವಂತಿದೆ. ಹಾಗೆ ನೋಡಿದರೆ, ಅತಂತ್ರ ಲೋಕಸಭೆಯಂಥ ಪರಿಸ್ಥಿತಿ ಬಂದರೆ ಅದಕ್ಕೆ ಹೊಣೆ ನರೇಂದ್ರ ಮೋದಿಯವರೇ ಅಲ್ಲವೆ?

ಅನುಷ್ಠಾನ ಕಷ್ಟಸಾಧ್ಯವಾದ ಅಗಾಧ ಭರವಸೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದು, ಅವನ್ನು ಈಡೇರಿಸಲಾಗದೆ ಕೈಚೆಲ್ಲಿರುವ ಅವರನ್ನು ನೋಡಿದರೆ ‘ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ ಶೂರನೂ ಅಲ್ಲ’ ಎಂಬ ಮಾತು ನೆನಪಾಗುತ್ತದೆ.

ADVERTISEMENT

ಚಂದ್ರಪ್ರಭಕಠಾರಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.