ADVERTISEMENT

2013 : ಚಲುವಿ ಬಾರೆ !

ಪ್ರೊ.ಜಿ.ಎಚ್.ಹನ್ನೆರಡುಮಠ
Published 31 ಡಿಸೆಂಬರ್ 2012, 19:59 IST
Last Updated 31 ಡಿಸೆಂಬರ್ 2012, 19:59 IST

ಹೊಸವರ್ಷದಾ ಚಲುವಿ ಚಲ್ವ ಸುಂದರಿ ಬಾರೆ
ಕನಸುಗಳ ಗಿಟಗೊಬ್ರಿ ಬೆಲ್ಲ ತಾರೆ
ಪ್ರಳಯ ಭೀತಿಯ ಹಾಕಿ ಹಳೆಯ ವರ್ಷವು ಹೋತು

ಹೊಸವೀರ ಸಂಕಲ್ಪ ತುಂಬಿ ಬಾರೆ
ಕೆಟ್ಟ ಕನಸನು ಕೊಟ್ಟು ಕನ್ನೆಯರ ಎದೆ ಸುಟ್ಟು
ಕಾಡಿ ಹೋಗಿಹ ವರ್ಷ ಸಾಕುಸಾಕು

ಥೈಥೈಯ್ಯ ಹೊಸವರ್ಷ ನವಗಾನ ಸಂಘರ್ಷ
ಹೊಸ ಶಕ್ತಿ ಹೊಸ ಯುಕ್ತಿ ಸತ್ಯ ಬೇಕು
ಹರೆಯ ಹೆಣ್ಣಿಗೆ ಶರಣು ಮಕ್ಕಳಿಗೆ ಶುಭಶರಣು

ಅನ್ನವಿಲ್ಲದ ಜನಕೆ ಕೋಟಿ ಶರಣು
ಸೋತ ಜನಗಳ ಕೂಗು ಕೇಳ್ವ ಜನರಿಗೆ ಶರಣು
ಹೊಸವರ್ಷದಾ ಹರ್ಷ ಚಲುವಿ ಶರಣು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.