ADVERTISEMENT

ಕಾಣೆಯಾದ ಸಂಪ್ರದಾಯ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST

ಹಿಂದೆಲ್ಲ ಹೊಸ ವರ್ಷ, ಸಂಕ್ರಾಂತಿ, ಯುಗಾದಿ, ದೀಪಾವಳಿ, ಕ್ರಿಸ್‌ಮಸ್ ಸಂದರ್ಭಗಳಲ್ಲಿ ಸ್ನೇಹಿತರು, ಹಿತೈಷಿಗಳು ಪರಸ್ಪರ ಶುಭಾಶಯ ಪತ್ರಗಳನ್ನು ಅಂಚೆ ಮೂಲಕ ಕಳುಹಿಸುತ್ತಿದ್ದರು. ಜೊತೆಗೆ ಅದರಲ್ಲಿ ಒಂದು ಸಂದೇಶ ಬರೆದು ಸಹಿ ಮಾಡುತ್ತಿದ್ದರು. ಇದನ್ನು ಓದುವಾಗ ಮೈಮನ ಪುಳಕಗೊಳ್ಳುತ್ತಿತ್ತು. ಇಂಥ ಪತ್ರಗಳನ್ನು ಕೆಲವರು ಸಂರಕ್ಷಿಸಿಟ್ಟುಕೊಳ್ಳುತ್ತಿದ್ದರು. ಹಬ್ಬದ ಸಂದರ್ಭಕ್ಕೆ ತಕ್ಕಂಥ ಶುಭಾಶಯ ಪತ್ರಗಳು ಮಾರುಕಟ್ಟೆಯಲ್ಲಿ ವಿಪುಲವಾಗಿ ಲಭ್ಯವಾಗುತ್ತಿದ್ದವು. ಈಗೀಗ ಈ ಸಂಪ್ರದಾಯ ಕಡಿಮೆಯಾಗುತ್ತಿದೆ.

ಈ ನಡುವೆ ದಿನಪತ್ರಿಕೆಗಳು ಮಾತ್ರ ಹಬ್ಬ– ಹರಿದಿನಗಳಂದು ತನ್ನ ವಾಚಕರಿಗೆ, ಜಾಹೀರಾತುದಾರರಿಗೆ ಹಾಗೂ ಹಿತೈಷಿಗಳಿಗೆ ತಪ್ಪದೇ ಶುಭಾಶಯ ಸಲ್ಲಿಸುವ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿರುವುದು ಸಂತೋಷ. ಶುಭಾಶಯ ಪತ್ರ ರವಾನೆಯಲ್ಲಿ ವಿಶೇಷವಾದ ಸಂತೋಷ ಇರುವುದರಿಂದ ಈ ಸಂಪ್ರದಾಯವನ್ನು ಉಳಿಸಲು ಎಲ್ಲರೂ ಮುಂದಾಗಬೇಕು.

–ಎ.ಕೆ. ಅನಂತಮೂರ್ತಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.