ADVERTISEMENT

ನಿಯಂತ್ರಣ ಅಗತ್ಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 19:30 IST
Last Updated 16 ಜನವರಿ 2018, 19:30 IST

ಮಂಗಳೂರಿನ ಕಾಲೇಜೊಂದರ ವಿದ್ಯಾರ್ಥಿನಿಯರು, ರಸ್ತೆಯಲ್ಲೇ ಡ್ಯಾನ್ಸ್ ಮಾಡಿ ಕೆಲವು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಳಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಇದೊಂದು ಕೆಟ್ಟ ಬೆಳವಣಿಗೆ. ತಮ್ಮ ಕಾಲೇಜುಗಳಲ್ಲೇ ಡ್ಯಾನ್ಸ್‌ ಪ್ರದರ್ಶಿಸಲು ವಿದ್ಯಾರ್ಥಿಗಳಿಗೆ ಅವಕಾಶವಿದೆ. ಅದು ಸಾಲ
ದೆಂದರೆ ಬಯಲಿನಲ್ಲಿ ಡ್ಯಾನ್ಸ್‌ ಮಾಡಲಿ. ಅದನ್ನು ಬಿಟ್ಟು ಹತ್ತಾರು ಮಂದಿಯ ಸಂತೋಷಕ್ಕಾಗಿ ನೂರಾರು ವಾಹನಗಳ ಓಡಾಟಕ್ಕೆ ಅಡ್ಡಿಪಡಿಸಿ, ಸಾವಿರಾರು ಜನರಿಗೆ ತೊಂದರೆ ಕೊಡಬೇಕಿತ್ತೇ?

ಇತ್ತೀಚೆಗೆ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ‘ರಸ್ತೆ ಹಬ್ಬ’ ನಡೆಸಿದ್ದರಿಂದ ಅಕ್ಕಪಕ್ಕದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸಾವಿರಾರು ಮಂದಿ ನಾಗರಿಕರು ಕಿರಿಕಿರಿ ಅನುಭವಿಸಿದ್ದುಂಟು.
ಮಂಗಳೂರಿನ ಕಾಲೇಜು ವಿದ್ಯಾರ್ಥಿನಿಯರ ‘ರಸ್ತೆ ಡ್ಯಾನ್ಸ್’ಗೆ ಮೈಸೂರಿನಲ್ಲಿ ನಡೆದ‘ರಸ್ತೆ ಹಬ್ಬ’ ಸ್ಫೂರ್ತಿ ಆಗಿರಬಹುದು(?).

ADVERTISEMENT

ಸಂಚಾರಕ್ಕೆ ತೊಂದರೆ ಉಂಟುಮಾಡುವ ರಸ್ತೆ ಹಬ್ಬ, ರಸ್ತೆ ಡ್ಯಾನ್ಸ್ ಸಂಸ್ಕೃತಿಗೆ ಕಡಿವಾಣ ಹಾಕುವುದು ಸೂಕ್ತ. ಇಲ್ಲವಾದರೆ ಈ ಸಂಸ್ಕೃತಿ ಇತರ ಪಟ್ಟಣ, ನಗರಗಳಿಗೆ ಹಬ್ಬಬಹುದು!

-ಸಿ.ಸಿದ್ದರಾಜು ಆಲಕೆರೆ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.