ADVERTISEMENT

ಇದು ದೇಶಾಭಿಮಾನವೇ?

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 19:30 IST
Last Updated 26 ಜನವರಿ 2018, 19:30 IST

‘ಪದ್ಮಾವತ್‌’ ಸಿನಿಮಾದ ಕಾರಣಕ್ಕೆ ದೇಶದ ವಿವಿಧೆಡೆ ಹೋರಾಟ– ಹಿಂಸಾಚಾರಗಳು ನಡೆಯುತ್ತಿರುವುದು ತುಂಬಾ ಆಘಾತಕಾರಿಯಾಗಿದೆ. ‘ರಜಪೂತ ವಂಶಕ್ಕೆ ಸೇರಿದ, ರಾಣಿ ಪದ್ಮಿನಿಯ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಕೆಲಸ ಈ ಚಿತ್ರದಲ್ಲಾಗಿದೆ’ ಎಂದು ಕೆಲವರು ಆರೋಪಿಸುತ್ತಿದ್ದಾರೆ.

ಪದ್ಮಿನಿಯ ವ್ಯಕ್ತಿತ್ವಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿರುವವರು, ಇಂದಿನ ಮಹಿಳೆಯ (ದೀಪಿಕಾ ಪಡುಕೋಣೆ) ಬಗ್ಗೆ ಹಗುರವಾಗಿ ಮಾತನಾಡುವುದು, ಜೀವ ಬೆದರಿಕೆ ಹಾಕುವುದು ಎಷ್ಟು ಸರಿ? ‘ಚಿತ್ರ ಬಿಡುಗಡೆಯಾದರೆ ಭಾರತವೇ ಹೊತ್ತಿ ಉರಿಯಲಿದೆ’ ಎಂದು ಬೆದರಿಕೆ ಹಾಕುವವರಿಗೆ, ನಮ್ಮ ದೇಶದ ಇತಿಹಾಸದ ಬಗ್ಗೆ ಎಷ್ಟು ಅಭಿಮಾನವಿದೆ ಎಂಬುದು ಸ್ಪಷ್ಟವಾಗುತ್ತದೆ.

ದೇಶದಲ್ಲಿ ನಡೆಯುತ್ತಿರುವ ಅಕ್ರಮ, ಅತ್ಯಾಚಾರ, ಭ್ರಷ್ಟಾಚಾರ, ದೌರ್ಜನ್ಯಗಳ ವಿರುದ್ಧ ಪ್ರತಿಭಟಿಸುವುದನ್ನು ಬಿಟ್ಟು, ಸಿನಿಮಾ ವಿಚಾರದಲ್ಲಿ ರಾಜಕೀಯ ಮಾಡುವುದು ಕೆಟ್ಟ ಬೆಳವಣಿಗೆ. ಇದು ದೇಶಾಭಿಮಾನವಲ್ಲ.

ADVERTISEMENT

–ಪ್ರಶಾಂತ್‌ ಅಂಗಡಿ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.