ADVERTISEMENT

ಮದ್ಯ ನಿಷೇಧಿಸುವವರನ್ನು ಆರಿಸಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 19:30 IST
Last Updated 2 ಫೆಬ್ರುವರಿ 2018, 19:30 IST

ಸಾಣೆಹಳ್ಳಿಯ ಪಂಡಿತಾರಾಧ್ಯ ಶ್ರೀಗಳು, ‘ಮದ್ಯ ನಿಷೇಧಿಸುವವರನ್ನು ಪ್ರಜಾ ಪ್ರತಿನಿಧಿಯಾಗಿ ಆಯ್ಕೆ ಮಾಡಿ’ (ಪ್ರ.ವಾ., ಜ. 28) ಎಂದು ಕರೆಕೊಟ್ಟಿದ್ದಾರೆ. ಇದು ಸಂದರ್ಭೋಚಿತ.

ನಮ್ಮಲ್ಲಿ ಆಡಳಿತ ನಡೆಸುವವರು, ‘ಮದ್ಯ ಮಾರಾಟದಿಂದಲೇ ಸರ್ಕಾರಕ್ಕೆ ಆದಾಯ, ಮದ್ಯದ ಹಣದಿಂದಲೇ ಅಗ್ಗದ ಅಕ್ಕಿ ವಿತರಣೆ, ಮದ್ಯದ ಆದಾಯದಿಂದಲೇ ಬಿಸಿಯೂಟ...’ ಎನ್ನುತ್ತಾರೆ. ಇದು ಗಾಂಧಿನಾಡಿನ ಸಂಸ್ಕೃತಿಯೇ? ಮದ್ಯಪಾನದ ದುಷ್ಪರಿಣಾಮ ಎಂಬಂತೆ ಸಮಾಜದಲ್ಲಿ ಭ್ರಷ್ಟಾಚಾರ, ಅನಾರೋಗ್ಯಗಳು ತಾಂಡವವಾಡುತ್ತಿವೆ. ಯುವಕರು ಹಾದಿ ತಪ್ಪುತ್ತಿದ್ದಾರೆ. ಅವರನ್ನೇ ನಂಬಿದ ಕುಟುಂಬಗಳು ಬೀದಿಗೆ ಬಿದ್ದಿವೆ. ಆದರೂ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು, ಚುನಾವಣಾ ಸಮಯದಲ್ಲಿ ಎಲ್ಲರನ್ನೂ ಮದ್ಯದಲ್ಲಿ ‘ತೇಲಿಸುತ್ತಾರೆ’.

ಎಂ. ಮೃತ್ಯುಂಜಯಪ್ಪ, ಚಿತ್ರದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.