ADVERTISEMENT

ಶಾಶ್ವತ ಪರಿಹಾರ ಅಲ್ಲ!

ಆನಂದ ಸಣಮನಿ, ಧಾರವಾಡ
Published 8 ಫೆಬ್ರುವರಿ 2018, 19:30 IST
Last Updated 8 ಫೆಬ್ರುವರಿ 2018, 19:30 IST

ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಮುಂದಿನ ಚುನಾವಣಾ ಪ್ರಣಾಳಿಕೆ ಹೇಗಿರುತ್ತದೆ ಎಂಬ ಬಗ್ಗೆ ಸಂಕ್ಷಿಪ್ತ ವಿವರ ನೀಡಿವೆ (ಪ್ರ.ವಾ., ಫೆ.8). ಯಾವ ಪಕ್ಷವೂ, ಯಾವ ಸಮಸ್ಯೆಗೂ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿಲ್ಲ ಎಂಬುದು ನಾಯಕರ ಮಾತುಗಳಿಂದ ಸ್ಪಷ್ಟವಾಗಿದೆ.

ರೈತರ ಸಾಲ ಮನ್ನಾ, ಉಚಿತ ಲ್ಯಾಪ್‌ಟಾಪ್ ವಿತರಣೆಯಂಥ ಯೋಜನೆಗಳ ಮೂಲಕ ಪಕ್ಷಗಳು, ಸರ್ಕಾರದ ಮುಂದೆ ಜನರು ಕೈ ಚಾಚಿ ನಿಲ್ಲುವಂತೆ ಮಾಡುತ್ತಿವೆ. ಹಸಿದವರಿಗೆ ಮೀನು ಕೊಡುವ ಕೆಲಸ ಆಗುವುದೇ ಹೊರತು ಮೀನು ಹಿಡಿಯುವುದನ್ನು ಕಲಿಸುತ್ತಿಲ್ಲ. ಅಷ್ಟೇ ಅಲ್ಲ, ನಾಯಕರು ಜನರಿಗೆ ಮೀನು ಕೊಟ್ಟು, ತಾವು ತಿಮಿಂಗಿಲವನ್ನೇ ನುಂಗುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಾದರೂ ಜನರು ರಾಜಕೀಯ ಪಕ್ಷಗಳ ಮರ್ಮವನ್ನು ಅರಿತು ಮತ ಹಾಕಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT