ADVERTISEMENT

7ಡಿ ಬಸ್‌ ಮತ್ತೆ ಸಂಚರಿಸಲಿ

ಜೆ.ಆರ್‌.ಆದಿನಾರಾಯಣ ಮುನಿ, ಬೆಂಗಳೂರು
Published 26 ಜನವರಿ 2015, 19:30 IST
Last Updated 26 ಜನವರಿ 2015, 19:30 IST

ಬನಶಂಕರಿಯಿಂದ ಜೀವನ್‌ ಭೀಮಾನಗರಕ್ಕೆ ಸಂಚರಿಸುವ 7ಡಿ ಬಸ್‌, ಬನಶಂಕರಿಯಿಂದ ಜಯನಗರ 4ನೇ ಬ್ಲಾಕ್‌, ಸಿದ್ದಾಪುರ, ಅಶೋಕ ಪಿಲ್ಲರ್‌, ಲಕ್ಕಸಂದ್ರ, ನಿಮ್ಹಾನ್ಸ್, ಬೆಂಗಳೂರು ಡೈರಿ, ಆಡುಗೋಡಿ, ಹೊಸೂರು ರಸ್ತೆ, ಶೂಲೆ ರಸ್ತೆ, ಹಾಸ್ಮಟ್‌ ಆಸ್ಪತ್ರೆ, ಟ್ರಿನಿಟಿ ವೃತ್ತ, ಹಲಸೂರು ಮಾರ್ಗವಾಗಿ ಜೀವನ್‌ ಭಿಮಾನಗರಕ್ಕೆ ಸಂಚರಿಸುತ್ತಿರುವುದು ಸರಿಯಷ್ಟೇ. ನಿಯಮಿತವಾಗಿ ಸಂಚರಿಸುತ್ತಿದ್ದ ಈ ಬಸ್ ಈಗ ಅಪರೂಪಕ್ಕೊಮ್ಮೆ ಸಂಚರಿಸುತ್ತಿದೆ. ಇದರಿಂದ ಬನಶಂಕರಿಯಿಂದ ನೇರವಾಗಿ ಜೀವನ್‌ ಭೀಮಾನಗರಕ್ಕೆ ಸಂಚರಿಸುವ ಪ್ರಯಾಣಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಆದ್ದರಿಂದ 7ಡಿ ಬಸ್ಸು ನಿಯಮಿತವಾಗಿ ಸಂಚರಿಸುವಂತೆ ಮಾಡಿದಲ್ಲಿ ಪ್ರಯಾಣಿಕರಿಗೆ ತುಂಬ ಅನುಕೂಲವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.