ADVERTISEMENT

ವಾಚಕರ ವಾಣಿ: ಮುಗಿದುಹೋದ ವಿಷಯ ಮತ್ತೆ ಕೆದಕುವುದೇಕೆ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 1 ಡಿಸೆಂಬರ್ 2021, 19:31 IST
Last Updated 1 ಡಿಸೆಂಬರ್ 2021, 19:31 IST

‘ಅವಿತಿಟ್ಟ ಅಂಬೇಡ್ಕರ್’ ಎನ್ನುವ ಪುಸ್ತಕವನ್ನು ಕಳೆದ ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿ ಮಾತನಾಡಿದ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರು, ‘ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್ ಪ್ರಯತ್ನಿಸಿದ್ದೇಕೆ’ ಎನ್ನುವ ಪ್ರಶ್ನೆ ಈಗಲೂ ಕಾಡುತ್ತಿದೆ ಎಂದಿರುವ ಬಗ್ಗೆ ವರದಿಯಾಗಿದೆ. ಹಾಗೆಯೇ ‘ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಕಾಶ್ಮೀರಕ್ಕೆ ಹೋದಾಗ ಅವರನ್ನು ಹಿಡಿದು ಜೈಲಿಗಟ್ಟಲಾಗಿತ್ತು. ವಾರದ ನಂತರ ಅವರ ನಿಧನದ ಸುದ್ದಿ ಹೊರಬಿದ್ದಿತ್ತು. ಅವರ ಬಲಿದಾನದ ಬಗ್ಗೆ ಶಾಲಾ ಪಠ್ಯ ಸೇರಿದಂತೆ ಎಲ್ಲಿಯೂ ಕಾಣುವುದಿಲ್ಲ’ ಎನ್ನುವ ಆರೋಪವನ್ನು ಕೂಡ ಅವರು ಮಾಡಿದ್ದಾರೆ.

ಒಂದು ರಾಜಕೀಯ ಪಕ್ಷವಾಗಿ ತನ್ನ ಎಲ್ಲ ಶಕ್ತಿಯನ್ನೂ ಬಳಸಿ ಚುನಾವಣೆಯಲ್ಲಿ ಎದುರಾಳಿಯನ್ನು ಸೋಲಿಸುವ ಹಕ್ಕು ಯಾವುದೇ ಪಕ್ಷಕ್ಕೆ ಇರುತ್ತದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಎದುರಾಗಿ ನಿಂತವರು ಅಂಬೇಡ್ಕರ್. ಪ್ರಜಾಪ್ರಭುತ್ವ ಮಾರ್ಗದಲ್ಲಿ ತನಗಿರುವ ಹಕ್ಕನ್ನು ಬಳಸಿಯೇ ಕಾಂಗ್ರೆಸ್ ಪಕ್ಷವು ಡಾ. ಅಂಬೇಡ್ಕರ್ ಅವರನ್ನು ಸೋಲಿಸಿತ್ತು. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಅನುಮಾನಾಸ್ಪದ ಸಾವು ಮುಗಿದುಹೋದ ಅಧ್ಯಾಯ. ಇಂತಹ ವಿಷಯಗಳನ್ನು ಮತ್ತೊಮ್ಮೆ ಕೆದಕಿ ವಿವಾದ ಸೃಷ್ಟಿಸುವುದು ತರವಲ್ಲ. ಅವಿತಿಟ್ಟ ಅಂಬೇಡ್ಕರ್ ಕೃತಿಯ ಲೇಖಕರು ಕೂಡ ಹಳೆಯ ವಿಷಯಗಳನ್ನು ಮುಂದಿಟ್ಟು, ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷದ ವಿರುದ್ಧ ಪಥದಲ್ಲಿ ನಿಲ್ಲಿಸುವ ಕೆಲಸ ಮಾಡಿದ್ದಾರೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ ಬೇಡ.

–ಚಂದನ್, ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.